ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ  ಬಂಧಿತ ಅರೋಪಿ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಸಮಯ ಮತ್ತು   ದಿನಾಂಕ ಕೋರಿ  ಎಸ್ಐಟಿ ಪತ್ರ ಬರೆದಿದೆ.

ಬೆಂಗಳೂರು (ಮಾ. 15):  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಂಧಿತ ಅರೋಪಿ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಸಮಯ ಮತ್ತು ದಿನಾಂಕ ಕೋರಿ ಎಸ್ಐಟಿ ಪತ್ರ ಬರೆದಿದೆ.

ಗುಜರಾತ್ ಅಹಮದಾಬಾದ್ ಎಫ್ಎಸ್ಎಲ್’ಗೆ ಎಸ್ಐಟಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಮೇರೆಗೆ ನವೀನ್ ಕುಮಾರ್ ಮಂಪರು ಪರೀಕ್ಷೆ ನಡೆಸಲಾಗುತ್ತಿದೆ. ಆರೋಪಿ ನವೀನ್ ಕುಮಾರ್ ಒಪ್ಪಿಗೆ ಮೇರೆಗೆ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ ನೀಡಿದೆ. ಕೋರ್ಟ್ ಅನುಮತಿ ಮೇರೆಗೆ ನಿನ್ನೆ ಅಹಮದಾಬಾದ್ ಎಫ್ಎಸ್ಎಲ್’ಗೆ ಎಸ್ಐಟಿ ಪತ್ರ ಬರೆದಿದೆ. ಎಫ್ಎಸ್ಎಲ್ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದ ನಂತರ ಮಂಪರು ಪರೀಕ್ಷೆ ನಡೆಸಲಾಗುತ್ತದೆ.