ನವದೆಹಲಿ [ಜು.19] :  ಬಹುಕೋಟಿ ವಂಚನೆ ಆರೋಪ ಹೊತ್ತು ತಲೆಮರೆಸಿಕೊಂಡಿರುವ ಐಎಂಎ ಸಂಸ್ಥೆ ಮಾಲಿಕ ಮಹಮ್ಮದ್‌ ಮನ್ಸೂರ್‌ ಖಾನ್‌ ಬಂಧನವಾಗಿದೆ. ದಿಲ್ಲಿಯಲ್ಲಿ ತಡರಾತ್ರಿ ಎಸ್ ಐ ಟಿ ಅಧಿಕಾರಿಗಳು ಮನ್ಸೂರ್ ಖಾನ್ ಬಂಧಿಸಿದ್ದಾರೆ. 

"

ತಲೆಮರೆಸಿಕೊಂಡು ದುಬೈ ತೆರಳಿದ್ದ ಮನ್ಸೂರ್ ದಿಲ್ಲಿಯಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಕಳೆದ ನಾಲ್ಕು ದಿನಗಳ ಹಿಂದಷ್ಟೇ 24 ಗಂಟೆಯಲ್ಲಿ ಭಾರತಕ್ಕೆ ಬರುವುದಾಗಿ ಹೇಳಿದ್ದ ಮನ್ಸೂರ್ ಖಾನ್ ಇದೀಗ ಪೊಲೀಸರ ವಶದಲ್ಲಿದ್ದಾನೆ. 

ಸಾವಿರಾರು ಜನರಿಗೆ ಕೊಟ್ಯಂತರ ರು. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ. ಈತನ ಕಂಪನಿಯಲ್ಲಿ ಹಣ ಹೂಡಿದ್ದ ಹಲವು ಕುಟುಂಬಗಳು ಬೀದಿಗೆ ಬಿದ್ದಿದ್ದವು.