ಶಿರಸಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಬಿಗಿ ಭದ್ರತೆಯ ನಡುವೆಯೂ ಕಲ್ಲು ತೂರಾಟ ಮುಂದಿವರೆದಿದೆ. ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರು (ಡಿ.12): ಶಿರಸಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಬಿಗಿ ಭದ್ರತೆಯ ನಡುವೆಯೂ ಕಲ್ಲು ತೂರಾಟ ಮುಂದಿವರೆದಿದೆ. ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶಿರಸಿ ನಗರದ ಕೋರ್ಟ್ ರಸ್ತೆ ಸೇರಿದಂತೆ ನಾಲ್ಕಾರು ಕಡೆಗಳಲ್ಲಿ ಕಲ್ಲು ತೂರಾಟ ನಡೆದಿದೆ. ಮಾಧ್ಯಮದವರ ಮೇಲೆ ಕಲ್ಲು ತೂರಾಟ ನಡೆದಿದ್ದು ಇಬ್ಬರು ಪತ್ರಕರ್ತರಿಗೆ ಗಾಯವಾಗಿದೆ ಅಗ್ನಿಶಾಮಕದಳ ವಾಹನ ಸೇರಿ 6 ವಾಹನಗಳು ಜಖಂಗೊಂಡಿದೆ. ಕಾರ್ಯಕರ್ತರು ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸಲು ಆರಕ್ಷಕರು ಹರಸಾಹಸ ಪಡುತ್ತಿದ್ದಾರೆ. ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರನ್ನು ಬಂಧಿಸಲಾಗಿದೆ.
ಈ ಹಿನ್ನಲೆಯಲ್ಲಿ ಸಿಎಂ ನಿವಾಸದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸಿಎಂ ಭೇಟಿ ಮಾಡಿ ಸತತ ಒಂದು ಗಂಟೆಯಿಂದ ಚರ್ಚೆ ನಡೆಸುತ್ತಿದ್ದಾರೆ. ಗೃಹ ಸಚಿವರ ಜೊತೆ ಡಿಐಜಿ ನೀಲಮಣಿ ರಾಜು ಕೂಡ ಭಾಗಿಯಾಗಿದ್ದಾರೆ. ಸಿಎಂ ಇಬ್ಬರಿಂದ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ.
