ಸ್ವಂತ ಮನೆ ಕನಸಿದೆಯಾ? ನಿವೇಶನ ಪಡೆಯೋದು ಮತ್ತಷ್ಟು ಸುಲಭ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 5:29 PM IST
Single-window clearance for real estate projects in Karnataka: Housing Minister U.T. Khader
Highlights

ವಸತಿ ಯೋಜನೆಗಳಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದ್ದು ಏಕ.ಗವಾಕ್ಷಿ ಪದ್ಧತಿ ಜಾರಿಗೆ ಮುಂದಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದು ಸರಳ ಸೂತ್ರಗಳನ್ನು ತಿಳಿಸಿದ್ದಾರೆ.

ಬೆಂಗಳೂರು[ಜು.21]  ನಗರ ಮತ್ತು ಪಟ್ಟಣ ಪ್ರದೇಶದ ಮನೆ ನಿರ್ಮಾಣ, ಭೂ ಪರಿವರ್ತನೆ ಹಾಗೂ ಬಡಾವಣೆ ನಕ್ಷೆಗೆ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ತರಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. 

ಏಕಗವಾಕ್ಷಿ ವ್ಯವಸ್ಥೆ  ನಗರ ಪ್ರದೇಶದ ನಾಗರಿಕರ ಅನೇಕ ಪ್ರಶ್ನೆಗೆ ಉತ್ತರ ನೀಡಲಿದೆ. ಕಟ್ಟಡ ನಿರ್ಮಾಣ ಸಂಬಂಧಿಸಿದ ಅರ್ಜಿಗಳನ್ನು 30 ದಿನದಲ್ಲಿ ವಿಲೇವಾರಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಣ್ಣ ಸೈಟ್ ‌ಗಳಲ್ಲಿ ಮನೆ ನಿರ್ಮಾಣ ಕ್ಕೆ ಏಕ ಗವಾಕ್ಷಿ ಪದ್ಧತಿ ಜಾರಿ ಮಾಡಲಾಗುತ್ತಿದ್ದು ಆಗಸ್ಟ್‌ 4 ರಂದು ಮುಡಾ ಅದಾಲತ್ ನಡೆಸಿ ಸ್ಥಳದಲ್ಲೇ ಇತ್ಯರ್ಥ ಮಾಡಲಾಗುವುದು.  ಮುಡಾದಲ್ಲಿ(Mangalore Urban Development Authority) ಕಡತ ವಿಲೇವಾರಿ ಸಮಸ್ಯೆ ನಿವಾರಿಸಲು ಸ್ವಯಂ ಚಾಲಿತ ದಾಖಲೀಕರಣ  ವ್ಯವಸ್ಥೆ ಯನ್ನು ಅಕ್ಟೋಬರ್  15 ರಿಂದ ಜಾರಿಯಾಗಲಿದೆ ಎಂದು ತಿಳಿಸಿದರು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ  ಎಲ್ಲ ದಾಖಲೆ ಸರಿ ಇದ್ದರೆ ವಾರದೊಳಗೆ ಅನುಮತಿ ಪತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೇಂದ್ರದ 4 ವರ್ಷದ ಸಾಧನೆ ಗೊತ್ತಾಗಿದೆ! ಅವಿಶ್ವಾಸ ಗೊತ್ತುವಳಿ ಸೋಲಾಗಿರಬಹುದು. ಆದರೆ ನಾವು ಜನರ ವಿಶ್ವಾಸ ಗೆಲ್ಲುವಲ್ಲಿ  ಯಶಸ್ವಿ ಆಗಿದ್ದೇವೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸ  ಗೊತ್ತುವಳಿ  ಸಹಜ ಪ್ರಕ್ರಿಯೆ. ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಸಾಕಷ್ಟು  ವಿಷಯಗಳ ಕುರಿತು ಸುಧೀರ್ಘ  ಚರ್ಚೆ ಆಗಿದೆ. ಕೇಂದ್ರ ಸರಕಾರದ 4 ವರ್ಷಗಳ ಸಾಧನೆ ಏನು ಎಂಬುದು ಕೂಡ ಜನರಿಗೆ ಗೊತ್ತಾಗಿದೆ. 

loader