, ‘ಹೋಟೆಲ್‌ನ ಕೊಠಡಿಯಲ್ಲಿರುವುದಕ್ಕಿಂತ ಬೀದಿಯಲ್ಲೇ ನಾನು ಸುರಕ್ಷಿತ ಎಂದು ಭಾವಿಸಿದ ಸಿಬ್ಬಂದಿ ಕೊಠಡಿ ನೀಡಲು ನಿರಾಕರಿಸಿದ್ದಾರೆ. ಇದರಿಂದ ನಾನು ಬೀದಿಯಲ್ಲಿ ನಿಂತಿದ್ದೇನೆ,'
ಹೈದರಾಬಾದ್(ಜೂ.26): ಒಂಟಿ ಎಂಬ ಕಾರಣಕ್ಕೆ ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ ಆನ್ಲೈನ್ ಮೂಲಕ ಕಾಯ್ದಿರಿಸಿದ ಹೋಟೆಲ್ ಕೊಠಡಿ ಕೊಡಲು ನಿರಾಕರಿಸಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಪ್ರಕರಣ ಕುರಿತು ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರಿನ ಪರಿಸರ ವಿಜ್ಞಾನಿ ಮತ್ತು ಕವಿ ನೂಪುರ್ ಸಾರಸ್ವಾತ್, ಗೋ ಐಬಿಬೋ ವೆಬ್ಸೈಟ್ ಮೂಲಕ ಹೈದ್ರಾಬಾದ್ನಲ್ಲಿ ಹೋಟೆಲ್ ಕೊಠಡಿ ಕಾದಿರಿಸಿದ್ದರು. ಆದರೆ ನೂಪುರ್ ಭಾನುವಾರ ಹೋಟೆಲ್ಗೆ ತೆರಳಿದ ವೇಳೆ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಒಂಟಿ ಮಹಿಳೆಯರು, ವಿವಾಹವಾಗದ ಜೋಡಿ ಮತ್ತು ಸ್ಥಳೀಯರಿಗೆ ಕೊಠಡಿ ನೀಡುವುದಿಲ್ಲ ಎಂಬ ನಿಯಮ ಇದೆ. ಈ ಕಾರಣಕ್ಕಾಗಿ ಕೊಠಡಿ ಕೊಡಲಾಗದು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.
ಈ ಕುರಿತು ತಕ್ಷಣವೇ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿರುವ ನೂಪುರ್, ‘ಹೋಟೆಲ್ನ ಕೊಠಡಿಯಲ್ಲಿರುವುದಕ್ಕಿಂತ ಬೀದಿಯಲ್ಲೇ ನಾನು ಸುರಕ್ಷಿತ ಎಂದು ಭಾವಿಸಿದ ಸಿಬ್ಬಂದಿ ಕೊಠಡಿ ನೀಡಲು ನಿರಾಕರಿಸಿದ್ದಾರೆ. ಇದರಿಂದ ನಾನು ಬೀದಿಯಲ್ಲಿ ನಿಂತಿದ್ದೇನೆ,' ಎಂದು ಕಿಡಿಕಾರಿದ್ದಾರೆ. ಈ ವಿಷಯ ವಿವಾದದ ಸ್ವರೂಪ ಪಡೆದ ಮೇಲೆ ಗೋಐಬಿಬೋ ನೂಪುರ್ ಅವರ ಕ್ಷಮೆಯಾಚಿಸಿದೆ.
