ಕೃಷ್ಣ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮೆಹಬೂಬ್ ಸಾಬ್

Singer Mehboob Saab Visited Udupi
Highlights

ಕೃಷ್ಣಮಠಕ್ಕೆ ಖ್ಯಾತ ಗಾಯಕ ಮೆಹಬೂಬ್ ಸಾಬ್ ಭೇಟಿ ನೀಡಿದ್ದಾರೆ. ತಂದೆ-ತಾಯಿಯ ಜೊತೆಗೆ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.  

ಉಡುಪಿ (ಮಾ. 26):  ಕೃಷ್ಣಮಠಕ್ಕೆ ಖ್ಯಾತ ಗಾಯಕ ಮೆಹಬೂಬ್ ಸಾಬ್ ಭೇಟಿ ನೀಡಿದ್ದಾರೆ. ತಂದೆ-ತಾಯಿಯ ಜೊತೆಗೆ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.  

ವಿಶೇಷ ಪೂಜೆ ನೆರವೇರಿಸಿದ ನಂತರ  ಪಲಿಮಾರು ಸ್ವಾಮೀಜಿಯಿಂದ ವಿಶೇಷ ಪ್ರಸಾದ ಸ್ವೀಕರಿಸಿದರು.  ಈ ವೇಳೆ ರಹಸ್ಯವೊಂದನ್ನು ಮೆಹಬೂಬ್ ಸಾಬ್ ಬಿಚ್ಚಿಟ್ಟಿದ್ದಾರೆ. ರಿಯಾಲಿಟಿ ಶೋ ನಡೆಯುವಾಗಲೇ ಸ್ಟುಡಿಯೋಗೇ ಬಂದಿದ್ದ ಮೇರು ನಟರೊಬ್ಬರು ಮೆಹಬೂಬ್​ಗೆ  50 ಸಾವಿರ ರೂಪಾಯಿ ಕೊಟ್ಟು ಹೋಗಿದ್ರಂತೆ.  ನಾನು ಹಣ ಕೊಟ್ಟೆ ಅಂತ ಹೇಳ್ಬೇಡಿ ಅನ್ನೋ ಕಂಡೀಶನ್ ಬೇರೆ ಹಾಕಿದ್ರಂತೆ. ಇದೀಗ ಆ ರಹಸ್ಯ ಬಯಲಾಗಿದೆ. ಮೆಹಬೂಬ್ ಗೆ ಹಣ ಕೊಟ್ಟ ಆ ನಟ ಯಾರು ಅಂತ ಗೊತ್ತಾಗಿದೆ. ಅದು ಬೇರೆ ಯಾರೂ ಅಲ್ಲ,  ರೆಬಲ್ ಸ್ಟಾರ್ ಅಂಬರೀಷ್.   ಮೆಹಬೂಬ್ ಗಾಯನ ಮೆಚ್ಚಿಕೊಂಡು ಬೆನ್ನು ತಟ್ಟಿ ಹೋದವರು ಅಂಬರೀಷ್ ಅಂತ ಗೊತ್ತಾದ ಮೇಲೆ ಮೆಹಬೂಬ್ ಮನಸ್ಸು ಕೇಳುತ್ತಿಲ್ಲ.  ಒಮ್ಮೆಯಾದರೂ  ಅಂಬರೀಷ್’ರನ್ನು ಭೇಟಿಯಾಗಬೇಕು ಅನ್ನೋ ಆಸೆಯಂತೆ.  ಉಡುಪಿಗೆ ಬಂದಾಗ ತನ್ನ ಈ ಆಸೆಯನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ ಮೆಹಬೂಬ್. 
 

loader