ಅಪಘಾತದಲ್ಲಿ ಪ್ರಸಿದ್ಧ ಗಾಯಕಿ ದುರ್ಮರಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 1:27 PM IST
Singer Manjusha Mohandas dies aged 27
Highlights

ಸ್ಟಾರ್ ಸಿಂಗರ್ ಮೂಲಕ ಪ್ರಸಿದ್ಧಿಯಾಗಿದ್ದ ಗಾಯಕಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಕಳೆದ ವಾರ ಅಪಘಾತಕ್ಕೆ ಈಡಾಗಿದ್ದು ಚಿಕಿತ್ಸೆ ಫಲಿಸದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ತಿರುವನಂತಪುರ :  ಭೀಕರ ಅಪಘಾತದಲ್ಲಿ ಮಲಯಾಳಂನ ಪ್ರಸಿದ್ಧ  ಹಾಡುಗಾರ್ತಿ ಮಂಜೂಷಾ ಮೋಹನ್ ದಾಸ್ ಮೃತಪಟ್ಟಿದ್ದಾರೆ. 

ಮಂಜೂಷಾ ಅವರು ಪ್ರಯಾಣಿಸುತ್ತಿದ್ದ ಬೈಕ್ ಕಳೆದ ವಾರ ಅಪಘಾತಕ್ಕೆ ಈಡಾಗಿತ್ತು. ಈ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 27 ವರ್ಷದ ಮಂಜೂಷಾ ಗುರುವಾರ ಕೊನೆಯುಸಿರೆಳೆದಿದ್ದಾರೆ. 

ಏಷಿಯಾನೆಟ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಐಡಿಯಾ ಸ್ಟಾರ್ ಸಿಂಗರ್ ಕಾರ್ಯಕ್ರಮದ ಮೂಲಕ ಮಂಜೂಷಾ ಪ್ರಸಿದ್ಧಿಯಾಗಿದ್ದರು. 

ಮಂಜೂಷಾ ಹಾಗೂ ಅವರ ಗೆಳತಿ ಅಂಜನಾ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ  ಟ್ರಕ್ ಒಂದು ಡಿಕ್ಕಿಯಾಗಿತ್ತು. ತನಿಪೂಜಾ ಪ್ರದೇಶದ ಎಂಸಿ ರೋಡ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿತ್ತು. 

ಈ ವೇಳೆ ಇಬ್ಬರನ್ನೂ ಕೂಡ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಂಜೂಷಾ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.

loader