ಖ್ಯಾತ ಗಾಯಕರೋರ್ವರು ಲೋಕಸಭಾ ಚುನಾವಣೆ ಬಿಸಿ ಜೋರಾಗಿರುವ ಈ ಹೊತ್ತಿನಲ್ಲೇ ಪ್ರಖ್ಯಾತ ಗಾಯಕರೋರ್ವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನವದೆಹಲಿ: ಖ್ಯಾತ ಗಾಯಕ, ಪಂಜಾಬಿ ಹಾಡುಗಳ ಮೂಲಕವೇ ದೇಶಾದ್ಯಂತ ಮನೆಮಾತಾಗಿರುವ ದಲೇರ್ ಮೆಹಂದಿ, ಶುಕ್ರವಾರ ಬಿಜೆಪಿ ಸೇರಿದರು.
ದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಹಲವು ಹಿರಿಯ ನಾಯಕರ ಸಮ್ಮುಖದಲ್ಲಿ ದಲೇರ್ ಬಿಜೆಪಿ ಸೇರಿದರು.
ವಾಯವ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಹಂಸರಾಜ್ ಹಂಸ್ ಕೂಡಾ ಈ ವೇಳೆ ಉಪಸ್ಥಿತರಿದ್ದರು. ಹಂಸರಾಜ್ ಅವರ ಮಗ, ದಲೇರ್ ಮೆಹಂದಿ ಅವರ ಮಗಳನ್ನು ವಿವಾಹವಾಗಿದ್ದಾರೆ.
ಈ ಹಿಂದೆ ದಲೇರ್ ಮೆಹೆಂದಿ ಮಾನವ ಕಳ್ಳ ಸಾಗಣಿಕೆ ಪ್ರಕರಣದಲ್ಲಿ ದಲೇರ್ ಮೆಹೆಂದಿ ಜೈಲು ಶಿಕ್ಷೆ ಅನುಭವಿಸಿ, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದರು.
