ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳು ಮತ್ತು ಚೀನಾದ ಕೋಟ್ಯಧೀಶರು ಸಿಂಗಾಪುರದತ್ತ ಆಕರ್ಷಿತರಾಗುತ್ತಿದ್ದಾರೆ
ಸಿಂಗಾಪುರ(ಜು.14): ಸಿಂಗಾಪುರದಲ್ಲಿ ಗಗನಚುಂಬಿ ಕಟ್ಟಡಗಳಿಗೇನೂ ಕೊರತೆ ಇಲ್ಲ. ಆದರೆ, 64ನೇ ಅಂತಸ್ತಿನಲ್ಲಿ ಖಾಸಗಿ ಈಜುಕೊಳವನ್ನು ಹೊಂದಿರುವ ಮೂರು ಅಂತಸ್ತಿನ ಪೆಂಟ್ ಹೌಸ್ (ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿದ ನಿವಾಸ) ಅಪಾರ್ಟ್‌ಮೆಂಟ್‌ವೊಂದು ಬರೋಬ್ಬರಿ 471 ಕೋಟಿ ರು.ಗಳಿಗೆ ಮಾರಾಟಕ್ಕಿದೆ.
ಸಿಂಗಾಪುರದ ಅತಿ ಎತ್ತರದ ಕಟ್ಟಡ ವಾಲ್ಲಿಚ್ ಸ್ಟೀಟ್‌ನಲ್ಲಿರುವ ತಾನ್ಜೆಗ್ ಪಗರ್ ಸೆಂಟರ್‌ನಲ್ಲಿರುವ ‘ಬಂಗ್ಲೋ ಇನ್ ದ ಸ್ಕೈ’ ಅಪಾರ್ಟ್‌ಮೆಂಟ್ ಈ ವರ್ಷದ ಅಂತ್ಯದ ವೇಳೆಗೆ ಅನಾವರಣಗೊಳ್ಳಲಿದ್ದು, ಸಿಂಗಾಪುರದಲ್ಲಿಯೇ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್ ಎನಿಸಿಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳು ಮತ್ತು ಚೀನಾದ ಕೋಟ್ಯಧೀಶರು ಸಿಂಗಾಪುರದತ್ತ ಆಕರ್ಷಿತರಾಗುತ್ತಿದ್ದಾರೆ. ಸುಮಾರು 50ರಿಂದ 75 ಕೋಟಿ ರು.ಗಳಿಗೆ ಮನೆಗಳು ಮಾರಾಟವಾಗುತ್ತಿವೆ.
