ಬಿಜೆಪಿ ಕಾರ್ಯಕರ್ತರು ಮುಸ್ಲೀಂ ಕಾರ್ಪೋರೇಟ್ ಒಬ್ಬರಿಗೆ ವಂದೇ ಮಾತರಂ ಹಾಡುವಂತೆ ಒತ್ತಾಯಿಸಿದ್ದು ಇಲ್ಲವಾದರೆ ಭಾರತ ಬಿಟ್ಟು ತೊಲಗುವಂತೆ ಹೇಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನವದೆಹಲಿ (ಮಾ.30): ಬಿಜೆಪಿ ಕಾರ್ಯಕರ್ತರು ಮುಸ್ಲೀಂ ಕಾರ್ಪೋರೇಟ್ ಒಬ್ಬರಿಗೆ ವಂದೇ ಮಾತರಂ ಹಾಡುವಂತೆ ಒತ್ತಾಯಿಸಿದ್ದು ಇಲ್ಲವಾದರೆ ಭಾರತ ಬಿಟ್ಟು ತೊಲಗುವಂತೆ ಹೇಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮೊನ್ನೆ ಈ ಘಟನೆ ನಡೆದಿದೆ. ಮೀರತ್ ನಲ್ಲಿ ಮುನಿಸಿಪಾಲ್ ಕಾರ್ಪೋರೇಶನ್ ಸಭೆ ನಡೆಯುತ್ತಿರುವಾಗ ಬಿಜೆಪಿ ಕಾರ್ಯಕರ್ತರು ನನಗೆ ವಂದೇ ಮಾತರಂ ಹೇಳುವಂತೆ ಒತ್ತಾಯಿಸಿದರು. ನಾವು ವಂದೇ ಮಾತರಂನ ಗೌರವಿಸುತ್ತೇವೆ. ಆದರೆ ಬಿಜೆಪಿ ಕಾರ್ಪೋರೇಟರ್ ಹಾಗೂ ಮೇಯರ್ ನಮಗೆ ಹಾಡುವಂತೆ ಒತ್ತಾಯಿಸಿದರು. ಇದು ಕಡ್ಡಾಯವಲ್ಲ ಅಂತ ಸುಪ್ರೀಂಕೋರ್ಟ್ ಹೇಳಿದೆ ಎಂದು ಎಸ್ಪಿ ಕಾರ್ಪೋರೇಟರ್ ಅಫ್ಜಲ್ ಹೇಳಿದ್ದಾರೆ.
