ಭಾರತೀಯ ಸಂಗೀತವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್’ರವರಿಗೆ ಲಂಡನ್’ನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಕಹಿ ಅನುಭವವಾಗಿದೆ.
ನವದೆಹಲಿ (ಜು.14): ಭಾರತೀಯ ಸಂಗೀತವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್’ರವರಿಗೆ ಲಂಡನ್’ನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಕಹಿ ಅನುಭವವಾಗಿದೆ.
ಲಂಡನ್’ನ ವೆಂಬ್ಲೇನಲ್ಲಿ ರೆಹಮಾನ್ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ವೇಳೆ ಕೇವಲ ತಮಿಳು ಹಾಡುಗಳನ್ನು ಮಾತ್ರ ಹಾಡಲಾಗುತ್ತಿದೆ. ಹಿಂದಿ ಹಾಡುಗಳನ್ನು ಕಡಿಮೆ ಹಾಡಲಾಗುತ್ತಿದೆ ಎಂದು ಹಿಂದಿ ಮಾತನಾಡುವ ಅಭಿಮಾನಿಗಳು ಕಾರ್ಯಕ್ರಮದಿಂದ ಮಧ್ಯಕ್ಕೆ ಎದ್ದು ಹೋಗಿದ್ದಾರೆ. ಜೊತೆಗೆ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಕೆಲವರು ರೆಹಮಾನ್ ವಿರುದ್ಧ ಟ್ವಿಟರ್’ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎ. ಆರ್ ರೆಹಮಾನ್ ಭಾರತಕ್ಕೆ ಫಿಲ್ಮ್’ಫೇರ್, ಗ್ರಾಮಿ, ಆಸ್ಕರ್, ಬಿಎಎಫ್’ಟಿಎ ಪ್ರಶಸ್ತಿಯನ್ನು ತಂದು ಕೊಟ್ಟ ಮಹಾನ್ ಸಂಗೀತ ನಿರ್ದೇಶಕ. ಅಭಿಮಾನಿಗಳ ಈ ವರ್ತನೆ ಅವರಿಗೆ ಭಾರೀ ಮುಜುಗರ ಉಂಟು ಮಾಡಿದೆ.
