ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪದ ಕುರಿತು ಮುಂದಿನ ವಾರ ಮೇ 16 ರಂದು ಮಹತ್ವದ ಸಭೆ ನಡೆಯಲಿದೆ. 

ನವದೆಹಲಿ: ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪದ ಕುರಿತು ಮುಂದಿನ ವಾರ ಮೇ 16 ರಂದು ಮಹತ್ವದ ಸಭೆ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂಪ್ರಕಾಶ್ ರಾವತ್ ಈ ಸಭೆ ಕರೆದಿದ್ದು, ಕಾನೂನು ಆಯೋಗದ ಮುಖ್ಯಸ್ಥ ನ್ಯಾ| ಬಿ.ಎಸ್.ಚೌಹಾಣ್ ಸೇರಿ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗಷ್ಟೆ ಕಾನೂನು ಆಯೋಗವು ಏಕಕಾಲಕ್ಕೆ ಚುನಾವಣೆ ನಡೆಸುವುದಾದರೆ ಏನೇನು ಬದಲಾವಣೆಯಾಗ ಬೇಕು ಎಂಬ ಬಗ್ಗೆ ವರದಿ ನೀಡಿದ್ದ ಬೆನ್ನಲ್ಲೇ ಈ ಸಭೆ ನಿಗದಿಯಾಗಿದೆ.