ನವದೆಹಲಿ[ಸೆ.30]: ಭ್ರಷ್ಟಾಚಾರ ಆರೋಪದ ಮೇಲೆ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಅವರ ಮೇಲೆ ಹೇರಲಾಗಿದ್ದ 6 ವರ್ಷಗಳ ಅನರ್ಹತೆಯನ್ನು ಚುನಾವಣಾ ಆಯೋಗ 5 ವರ್ಷ ಕಡಿತಗೊಳಿಸಿ 1 ವರ್ಷ 1 ತಿಂಗಳಿಗೆ ಶಿಕ್ಷೆ ಪ್ರಮಾಣ ಇಳಿಸಿ ಆದೇಶ ಹೊರಡಿಸಿದೆ. ಇದು ತಮಾಂಗ್‌ ಅವರು ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಸಿಕ್ಕಿಂ ಮುಕ್ತಿ ಮೋರ್ಚಾ ಪಕ್ಷ ಜಯಗಳಿಸಿದೆ. ಅನರ್ಹತೆಯ ಹೊರತಾಗಿಯೂ ಪ್ರೇಮ್‌ಸಿಂಗ್‌ ತಮಾಂಗ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಆಯೋಗದ ಈ ಆದೇಶದಿಂದ ತಮಾಂಗ್‌ ಚುನಾವಣಾ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದೆ. ಆದರೆ, ಚುನಾವಣಾ ಆಯೋಗದ ಈ ನಿರ್ಧಾರಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.