ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಮುಸ್ಲಿಂ ಯುವಕನನ್ನು ಸಿಖ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಾರು ಮಾಡಿರುವ ಘಟನೆ ಉತ್ತರಾಖಂಡ್ ನ ರಾಮನಗರದಲ್ಲಿ ನಡೆದಿದೆ. ರಾಮನಗರ್ ನ ಸಮೀಪದ ಗಿರಿಜಾ ದೇವಿ ದೇವಸ್ಥಾನದ ಬಳಿ ಹಿಂದೂ ಯುವತಿಯೋರ್ವಳೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಉದ್ರಿಕ್ತ ಗುಂಪು ಇವರ ಮೇಲೆ ಹಲ್ಲೆ ಮಾಡಿತ್ತು.
ರಾಮನಗರ್(ಮೇ.26): ಉದ್ರಿಕ್ತ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಮುಸ್ಲಿಂ ಯುವಕನನ್ನು ಸಿಖ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಾರು ಮಾಡಿರುವ ಘಟನೆ ಉತ್ತರಾಖಂಡ್ ನ ರಾಮನಗರದಲ್ಲಿ ನಡೆದಿದೆ. ರಾಮನಗರ್ ನ ಸಮೀಪದ ಗಿರಿಜಾ ದೇವಿ ದೇವಸ್ಥಾನದ ಬಳಿ ಹಿಂದೂ ಯುವತಿಯೋರ್ವಳೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಉದ್ರಿಕ್ತ ಗುಂಪು ಇವರ ಮೇಲೆ ಹಲ್ಲೆ ಮಾಡಿತ್ತು.
ಇಬ್ಬರನ್ನೂ ನಡುರಸ್ತೆಯಲ್ಲೇ ಥಳಿಸಲು ಪ್ರಾರಂಭಿಸಿದ ಗುಂಪು, ಯುವಕನನ್ನು ಸಾಯಿಸಲು ಮುಂದಾಗಿತ್ತು ಎಂದು ಹೇಳಲಾಗಿದೆ. ಸುದ್ದಿ ತಿಳಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಗನ್‌ದೀಪ್ ಸಿಂಗ್, ಸಹೋದ್ಯೋಗಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಜೋಡಿಯನ್ನು ರಕ್ಷಿಸಲು ಮುಂದಾದರು. ಗುಂಪು ಹಲ್ಲೆಗೆ ಮುಂದಾಗುತ್ತಿದ್ದಂತೇ ಯುವಕನನ್ನು ತಮ್ಮ ಬಾಹುಗಳಲ್ಲಿ ಬಂಧಿ ಮಾಡಿಕೊಂಡ ಗಗನ್‌ದೀಪ್, ಯುವಕನಿಗೆ ಹಾನಿಯಾಗದಂತೆ ನೋಡಿಕೊಂಡರು.
ಗಗನ್‌ದೀಪ್ ಧೈರ್ಯದ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಗಗನ್‌ದೀಪ್ ಅವರ ಕರ್ತವ್ಯ ನಿಷ್ಠೆಗೆ ನೆಟಿಜನ್ ಗಳು ತಲೆದೂಗಿದ್ದಾರೆ. ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಡ್ಜು ಕೂಡ ಅಧಿಕಾರಿ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಜೋಡಿಯನ್ನು ಪೊಲೀಸ್ ರಕ್ಷಣೆಯಲ್ಲಿ ಠಾಣೆಗೆ ಕರೊತಂದು ಮತ್ತೆ ಸುರಕ್ಷಿತವಾಗಿ ಅವರವರ ಪೋಷಕರಿಗೆ ಒಪ್ಪಿಸಿದ್ದಾರೆ.
