. ಇದೊಂದು ಜನಾಂಗೀಯ ದ್ವೇಷದ ಪ್ರಕರಣವಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಂಜಾಬ್‌ನಿಂದ ಮೂರು ವರ್ಷಗಳ ಹಿಂದೆ ವಲಸೆ ಹೋಗಿದ್ದ ಹರಿಕಾಂತ್ ಸಿಂಗ್ ಮೇಲೆ ಭಾನುವಾರ ಈ ಹಲ್ಲೆ ನಡೆದಿದೆ.

ನ್ಯೂಯಾರ್ಕ್(ಏ.18): ಅಮೆರಿಕದಲ್ಲಿ ಮತ್ತೊಮ್ಮೆ ಭಾರತೀಯ ಮೂಲದ ಸಿಖ್ ಚಾಲಕನ ಮೇಲೆ ಜನಾಂಗೀಯ ದಾಳಿ ನಡೆದಿದೆ. 25ರ ಹರೆಯದ ಸಿಖ್ ಕಾರು ಚಾಲಕನಿಗೆ, ಮದ್ಯಪಾನ ಮಾಡಿದ್ದ ಪ್ರಯಾಣಿಕರ ಗುಂಪು ಹಲ್ಲೆ ನಡೆಸಿ, ಅವರ ತಲೆಯ ರುಮಾಲನ್ನು ಕಿತ್ತು ಹಾಕಿದೆ. ಇದೊಂದು ಜನಾಂಗೀಯ ದ್ವೇಷದ ಪ್ರಕರಣವಾಗಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಂಜಾಬ್‌ನಿಂದ ಮೂರು ವರ್ಷಗಳ ಹಿಂದೆ ವಲಸೆ ಹೋಗಿದ್ದ ಹರಿಕಾಂತ್ ಸಿಂಗ್ ಮೇಲೆ ಭಾನುವಾರ ಈ ಹಲ್ಲೆ ನಡೆದಿದೆ. ‘‘ನಾನು ತುಂಬಾ ಭಯಭೀತನಾಗಿದ್ದೇನೆ. ನಾನು ಇಲ್ಲಿ ಕೆಲಸ ಮಾಡುವುದಿಲ್ಲ. ಇದು ನನ್ನ ಧರ್ಮದ ಮೇಲೆ ನಡೆದ ಹಲ್ಲೆ. ಇದು ನನ್ನ ನಂಬಿಕೆಗೆ ಅವಮಾನ ಮತ್ತು ತುಂಬಾ ಭಯಾನಕವಾದುದು’’ ಎಂದು ಹರಿಕಾಂತ್ ಹೇಳಿದ್ದಾರೆ.