ಕ್ಯಾಪ್ಟನ್ ಸರ್ಕಾರದಲ್ಲಿ ಮಂತ್ರಿಯಾಗಿರುವ ನವಜ್ಯೋತ್ ಸಿಧು ರಾಗವೀಗ ಬದಲಾಗಿದೆ. ಸರ್ಕಾರ ಅಸ್ಥಿತ್ವಕ್ಕೆ ಬಂದು ಇನ್ನೂ ಹೆಚ್ಚು ದಿನಗಳಾಗಿಲ್ಲ, ಅಷ್ಟರಲ್ಲೇ ನವಜೋತ್ ಸಿಂಗ್ ಸಿಧು ಬಹುದೊಡ್ಡ ಬೇಡಿಕೆಯನ್ನು ಮುಮನದಿಟ್ಟಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ 'ಕೈ' ಹಿಡಿದ ಸಿಧುಗೆ ಪಂಜಾಬ್ ಸರ್ಕಾರದಲ್ಲಿ ಆಶ್ರಯವೇನೋ ಸಿಕ್ಕಿದೆ ಆದರೆ ಸ್ಥಳೀಯ ಮಂತ್ರಿಯ ಸ್ಥಾನ ನೀಡಿರುವುದು ಮುನಿಸಿಗೆ ಕಾರಣವಾಗಿದೆ.
ಪಂಜಾಬ್(ಮಾ.21): ಕ್ಯಾಪ್ಟನ್ ಸರ್ಕಾರದಲ್ಲಿ ಮಂತ್ರಿಯಾಗಿರುವ ನವಜ್ಯೋತ್ ಸಿಧು ರಾಗವೀಗ ಬದಲಾಗಿದೆ. ಸರ್ಕಾರ ಅಸ್ಥಿತ್ವಕ್ಕೆ ಬಂದು ಇನ್ನೂ ಹೆಚ್ಚು ದಿನಗಳಾಗಿಲ್ಲ, ಅಷ್ಟರಲ್ಲೇ ನವಜೋತ್ ಸಿಂಗ್ ಸಿಧು ಬಹುದೊಡ್ಡ ಬೇಡಿಕೆಯನ್ನು ಮುಮನದಿಟ್ಟಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ 'ಕೈ' ಹಿಡಿದ ಸಿಧುಗೆ ಪಂಜಾಬ್ ಸರ್ಕಾರದಲ್ಲಿ ಆಶ್ರಯವೇನೋ ಸಿಕ್ಕಿದೆ ಆದರೆ ಸ್ಥಳೀಯ ಮಂತ್ರಿಯ ಸ್ಥಾನ ನೀಡಿರುವುದು ಮುನಿಸಿಗೆ ಕಾರಣವಾಗಿದೆ.
ಇದರಿಂದ ಅತೃಪ್ತಗೊಂಡ ಸಿಧು ಇದೀಗ ಪಂಜಾಬ್ ಮುಖ್ಯಂತ್ರಿ ಅಮರಿಂದರ್ ಸಿಂಗ್ ಬಳಿ ತನಗೆ ಸ್ಥಳೀಯ ಮಂತ್ರಿ ಸ್ಥಾನದೊಂದಿಗೆ ಗೃಹ ಖಾತೆ ಹಾಗೂ ನಗರಾಭಿವೃದ್ಧಿ ವಿಭಾಗದ ಅಧಿಕಾರವನ್ನೂ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಈ ಎರಡೂ ಖಾತೆಗಳನ್ನು ಒಂದುಗೂಡಿಸಬೇಕು ಎಂದಿದ್ದಾರೆ.
ಈ ಕುರಿತಯಾಗಿ ಮಾತನಾಡಿರುವ ಸಿಧು 'ಕೇಂದ್ರದಲ್ಲಿ ಈ ಖಾತೆಗಳು ಒಂದೇ ವಿಭಾಗದಲ್ಲಿವೆ ಆದರೆ ರಾಜ್ಯದಲ್ಲಿ ಮಾತ್ರ ಇದನ್ನು ಬೇರ್ಪಡಿಸಿದ್ದಾರೆ. ನಾನು ಈ ಕುರಿತಾಗಿ ಅಮರಿಂದರ್ ಸಿಂಗ್ ಬಳಿ ಮಾತನಾಡಿದ್ದು, ಅವರು ಈ ಕುರಿತಾಗಿ ಯೋಚಿಸುವುದಾಗಿ ತಿಳಿಸಿದ್ದಾರೆ' ಎಂದಿದ್ದಾರೆ.
