ನಂತರದ ಸ್ಥಾನ ಸಿದ್ದರಾಮಯ್ಯ ಅವರದು. ಈ ಅವಧಿಯಲ್ಲಿ 5 ಬಾರಿ ಸೇರಿ ಹೆಚ್.ಡಿ. ದೇವೇಗೌಡ, ಜೆ.ಹೆಚ್.ಪಟೇಲ್ ಹಾಗೂ ಧರ್ಮ'ಸಿಂಗ್ ಅವಧಿಯಲ್ಲಿ 7 ಬಾರಿ ಬಜೆಟ್ ಮಂಡಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಸ್.ಎಂ. ಕೃಷ್ಣ ಅವರಿದ್ದು, ಒಟ್ಟು 5 ಬಾರಿ ಬಜೆಟ್ ಮಂಡಿಸಿದ್ದಾರೆ.
ಬೆಂಗಳೂರು(ಮಾ.15): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸುವ ತಮ್ಮ 12ನೇ ಬಜೆಟ್ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿಕೊಂಡಿದ್ದಾರೆ.
ರಾಜ್ಯದ ಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಇಂದಿಗೂ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಅವರು ಒಟ್ಟಾರೆ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಹೆಗಡೆ ಅವರು ದಿವಂಗತ ೆಸ್.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ 1966-67ರಿಂದ 71-72ರ ಅವಧಿಯಲ್ಲಿ 6 ಬಾರಿ ಮಂಡಿಸಿದ್ದರು. ನಂತರ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1983-84ರಿಂದ 88-89ರ ಅವಧಿಯಲ್ಲಿ 7 ಬಾರಿ ಆಯವ್ಯಯ ಮಂಡಿಸಿದ್ದಾರೆ. ಹೀಗೆ 13 ಬಾರಿ ಬಜೆಟ್ ಮಂಡಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.