ಕಾವೇರಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದೆ.  ಆದರೆ, ಪ್ರಧಾನಿಯವರ ಅಪಾಯಿಂಟ್ ಮೆಂಟ್ ಸಿಗಲಿಲ್ಲ

ಮೈಸೂರು(ಅ.01): ಕಾವೇರಿ ಕೊಳ್ಳದ ಜನತೆಗೆ, ರಾಜ್ಯದ ಜನರಿಗೆ ಅನ್ಯಾಯವಾಗದಂತೆ ಸರಕಾರ ರಕ್ಷಣೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನಲ್ಲಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದೆ. ಆದರೆ, ಪ್ರಧಾನಿಯವರ ಅಪಾಯಿಂಟ್ ಮೆಂಟ್ ಸಿಗಲಿಲ್ಲ. ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಅಂತ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಇದೇವೇಳೆ, ವಿಶೇಷ ಸನ್ನಿವೇಶದಲ್ಲಿ ದಸರಾ ಉದ್ಘಾಟನೆ ಆಗುತ್ತಿದೆ. ಸರಳವಾಗಿ, ಸಾಂಪ್ರದಾಯಿಕ ಆಚರಣೆಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.