ಗೋವಾ ಸರ್ಕಾರವನ್ನು ತಾವು ಒಪ್ಪಿಸುವುದಾಗಿ ಬಿಜೆಪಿಯವರೇ ಹೇಳಿದ್ದರಿಂದ ಅವರನ್ನು ಕೇಳುತ್ತಿದ್ದೇವೆ.

ಯಾದಗಿರಿ(ಡಿ.23): ಮಹಾದಾಯಿ ವಿವಾದ ಇತ್ಯರ್ಥವಾಗಲು ಪ್ರಧಾನಿಯವರೇ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ ಸಿಎಂ ಸಿದ್ದರಾಮಯ್ಯ, ಗೋವಾ ಕಾಂಗ್ರೆಸ್ಸಿಗರಿಗೂ ನಮಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾದಗಿರಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗೋವಾ ಸರ್ಕಾರವನ್ನು ತಾವು ಒಪ್ಪಿಸುವುದಾಗಿ ಬಿಜೆಪಿಯವರೇ ಹೇಳಿದ್ದರಿಂದ ಅವರನ್ನು ಕೇಳುತ್ತಿದ್ದೇವೆ. ಒಂದು ವರ್ಷದಿಂದ ಸುಮ್ಮನಿದ್ದ ಬಿಜೆಪಿಯವರು ಈಗ ಪರಿವರ್ತನಾ ಯಾತ್ರೆಗೆ ಬರುವಾಗ ನೆನಪಾಗಿದೆ. ತಿಂಗಳೊಳಗಾಗಿ ನೀರು ಬಿಡಿಸುತ್ತೇನೆಂದು ಯಡಿಯೂರಪ್ಪ ಸುಳ್ಳು ಭರವಸೆ ನೀಡಿ ಸಿಕ್ಕಿಹಾಕಿಕೊಂಡಿದ್ದಾರೆ. ಅದಕ್ಕಾಗಿ ಬಿಜೆಪಿ ಕಚೇರಿ ಎದುರು ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತರೇನು ನಾವು ಹೇಳಿದಂತೆ ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.