ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬಾಡಿಗೆ ಮನೆಗಾಗಿ  ಹುಡಕಾಟ ನಡೆಸಿದ್ದಾರೆ. ಬಾದಾಮಿ ಯಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ, ಹುಡುಕುತ್ತಿದ್ದೇನೆ. ಬೇಗ ಮನೆ ಮಾಡುತ್ತೇನೆ ಎಂದರು

ಬಾದಾಮಿ: ನಾನು ಕ್ಷೇತ್ರಕ್ಕೆ ಬರದೆ ಇದ್ದರೂ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದೀರಿ. ಯಾವತ್ತೂ ನಿಮ್ಮನ್ನು ಮರೆಯುವುದಿಲ್ಲ. ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಿ ನಿಮ್ಮ ಋಣ ತೀರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಶಾಸಕ ಸಿದ್ದರಾಮಯ್ಯ ಹೇಳಿದರು. 

ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಬೇರೆ ಬೇರೆ ಕೆಲಸಗಳು ಇರುವುದರಿಂದ ನಿಮಗೆ ಸಿಗಲು ಕಷ್ಟವಾಗಬಹುದು. ತಿಂಗಳಲ್ಲಿ ಇಲ್ಲಿಯೇ ಕಚೇರಿ ಮಾಡುತ್ತೇನೆ. ಬಾದಾಮಿ ಯಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ, ಹುಡುಕುತ್ತಿದ್ದೇನೆ. ಬೇಗ ಮನೆ ಮಾಡುತ್ತೇನೆ ಎಂದರು.