ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸರ್ಕಾರದ ವಿರುದ್ಧ ಚಾರ್ಜ್'ಶೀಟ್‌ ಬಿಡುಗಡೆಗೊಳಿಸಿದ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಈಗಾಗಲೇ ಸುಪ್ರಿಂಕೋರ್ಟ್‌ ಮತ್ತು ಹೈಕೋರ್ಟ್‌'ನಲ್ಲಿ ಚಾರ್ಜ್'ಶೀಟ್‌ ಹಾಕಿಸಿಕೊಂಡ ಯಡಿಯೂರಪ್ಪ ಮತ್ತವರ ಪಕ್ಷದವರಿಗೆ ನಮ್ಮ ವಿರುದ್ಧ ಚಾರ್ಜ್'ಶೀಟ್ ಬಿಡುಗಡೆ ಮಾಡುವ ಅಧಿಕಾರವೇ ಇಲ್ಲ. ಪೊಲೀಸರೇ ಬಿಜೆಪಿ ನಾಯಕರ ವಿರುದ್ಧ ಚಾರ್ಜ್'ಶೀಟ್‌ ಸಲ್ಲಿಸಿದ್ದಾರೆ. ಇಷ್ಟಕ್ಕೂ ಬಿಜೆಪಿಯ ಚಾರ್ಜ್'ಶೀಟ್'ನಲ್ಲಿ ಸಾಕ್ಷಿಗಳೇ ಇಲ್ಲ" ಎಂದರು.

ಬೆಂಗಳೂರು: ರಾಜ್ಯದ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಗೆ ನನ್ನದೇ ನೇತೃತ್ವ. ಆದರೆ, ಚುನಾವಣೆ ನಂತರ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಹೀಗಂತ ಸ್ಪಷ್ಟಪಡಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂಗ್ರೆಸ್‌ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷಗಳು ಪೂರ್ಣಗೊಳ್ಳುತ್ತಿರುವ ಮುನ್ನಾ ದಿನವಾದ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ. ಅದಾದ ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ನಾಯಕನನ್ನು ಆಯ್ಕೆ ಮಾಡುತ್ತಾರೆ. ಅದಕ್ಕೆ ಹೈಕಮಾಂಡ್‌ ಒಪ್ಪಿಗೆ ದೊರೆತ ಬಳಿಕ ಮುಂದಿನ ಮುಖ್ಯಮಂತ್ರಿಯ ಆಯ್ಕೆ ಮಾಡಲಾಗುತ್ತದೆ. ಇದು ಕಾಂಗ್ರೆಸ್‌ ಪಕ್ಷದಲ್ಲಿ ಪಾಲಿಸಿಕೊಂಡು ಬಂದಿರುವ ನಿಯಮ. ಹೀಗಾಗಿ ನಾನೇನೂ ಯಡಿಯೂರಪ್ಪನವರಂತೆ ಜೇಬಿನಲ್ಲಿ 150 ಸೀಟು ಇಟ್ಟುಕೊಂಡು ಓಡಾಡುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಚಾರ್ಜ್'ಶೀಟ್‌ಗೆ ಸಾಕ್ಷಿ ಇಲ್ಲ: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಸರ್ಕಾರದ ವಿರುದ್ಧ ಚಾರ್ಜ್'ಶೀಟ್‌ ಬಿಡುಗಡೆಗೊಳಿಸಿದ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಈಗಾಗಲೇ ಸುಪ್ರಿಂಕೋರ್ಟ್‌ ಮತ್ತು ಹೈಕೋರ್ಟ್‌'ನಲ್ಲಿ ಚಾರ್ಜ್'ಶೀಟ್‌ ಹಾಕಿಸಿಕೊಂಡ ಯಡಿಯೂರಪ್ಪ ಮತ್ತವರ ಪಕ್ಷದವರಿಗೆ ನಮ್ಮ ವಿರುದ್ಧ ಚಾರ್ಜ್'ಶೀಟ್ ಬಿಡುಗಡೆ ಮಾಡುವ ಅಧಿಕಾರವೇ ಇಲ್ಲ. ಪೊಲೀಸರೇ ಬಿಜೆಪಿ ನಾಯಕರ ವಿರುದ್ಧ ಚಾರ್ಜ್'ಶೀಟ್‌ ಸಲ್ಲಿಸಿದ್ದಾರೆ. ಇಷ್ಟಕ್ಕೂ ಬಿಜೆಪಿಯ ಚಾರ್ಜ್'ಶೀಟ್'ನಲ್ಲಿ ಸಾಕ್ಷಿಗಳೇ ಇಲ್ಲ" ಎಂದರು.

ಇಂದು ಸಮಾವೇಶ ಚಿತ್ರದುರ್ಗ: ರಾಜ್ಯ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಜನಮನನ-ಜನನಮನ' ಹೆಸರಲ್ಲಿ ಬೆಂಗಳೂರು ವಿಭಾಗ ಮಟ್ಟದ ಫಲಾನುಭವಿಗಳ ಸಮಾವೇಶವನ್ನು ಶನಿವಾರ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 11 ಗಂಟೆಗೆ ಸಮಾವೇಶಕ್ಕೆ ಚಾಲನೆ ನೀಡುವರು.

ಕನ್ನಡಪ್ರಭ ವಾರ್ತೆ
epaper.kannadaprabha.in