ಸಾಧನೆಯ ಸಂಭ್ರಮ ಯಾತ್ರೆಗೆ ಬೀದರ್‌ನ ಬಸವಕಲ್ಯಾಣದಲ್ಲಿ ಡಿ. 13ರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ. 12ರ ಸಂಜೆಯೇ ವಿಮಾನದ ಮೂಲಕ ಬೀದರ್ ತಲುಪಲಿದ್ದಾರೆ. ಅನಂತರ ಯಾತ್ರೆ ಆರಂಭಗೊಳ್ಳಲಿದೆ.
ಬೆಂಗಳೂರು: ಸಾಧನೆಯ ಸಂಭ್ರಮ ಯಾತ್ರೆಗೆ ಬೀದರ್ನ ಬಸವಕಲ್ಯಾಣದಲ್ಲಿ ಡಿ. 13ರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚಾಲನೆ ದೊರೆಯಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ. 12ರ ಸಂಜೆಯೇ ವಿಮಾನದ ಮೂಲಕ ಬೀದರ್ ತಲುಪಲಿದ್ದಾರೆ. ಅನಂತರ ಯಾತ್ರೆ ಆರಂಭಗೊಳ್ಳಲಿದೆ.
ಬೆಳಗ್ಗೆ 10.30ಕ್ಕೆ, ಮಧ್ಯಾಹ್ನ 1 ಹಾಗೂ ಸಂಜೆ 4 ಗಂಟೆಗೆ ಒಂದರಂತೆ ನಿತ್ಯ ಮೂರು ಸಾರ್ವಜನಿಕ ಸಮಾರಂಭದಲ್ಲಿ ಅವರು ಭಾಷಣ ಮಾಡಲಿದ್ದಾರೆ. ಯಾತ್ರೆಯ ವಿವರ: ಡಿ. 13-ಬೀದರ್ನ ಬಸವಕಲ್ಯಾಣ, ಹುಮ್ನಾಬಾದ್ ಹಾಗೂ ಬಾಲ್ಕಿ. ಡಿ. 14 ಕೊಪ್ಪಳ ಜಿಲ್ಲೆಯ ಕುಷ್ಟಗಿ, ಗಂಗಾವತಿ ಹಾಗೂ ಕನಕಗಿರಿ, ಡಿ. 15ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರು, ಮಾನ್ವಿ ಮತ್ತು ಮಸ್ಕಿ. ಡಿ. 16 ರಂದು ಕಲಬುರಗಿ ಜಿಲ್ಲೆಯ ಅಫ್ಜಲ್ಪುರ, ಜೀವರ್ಗಿ ಹಾಗೂ ಸೇಡಂ. ಡಿ.17ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್, ಶಹಾಪುರ ಮತ್ತು ಸುರಪುರ. ಡಿ. 18ರಂದು ಬಳ್ಳಾರಿ ಜಿಲ್ಲೆಯ ಸಂಡೂರು, ಹೂವಿನ ಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ಅಥವಾ ಸಿರುಗುಪ್ಪ.
ಡಿ.19ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ತೇರದಾಳ ಮತ್ತು ಬೀಳಗಿ. ಡಿ.20 ರಂದು ವಿಜಯಪುರ ಜಿಲ್ಲೆ (ಕ್ಷೇತ್ರಗಳು ನಿಗದಿಯಾಗಿಲ್ಲ). ಡಿ.21 ಮತ್ತು 22 ರಂದು ಬೆಳಗಾವಿ ಜಿಲ್ಲೆ (ಕ್ಷೇತ್ರಗಳು ನಿಗದಿಯಾಗಬೇಕಿದೆ).
ಡಿ.23 ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕಲಘಟಗಿ ಮತ್ತು ಕುಂದಗೋಳ. ಡಿ.24ರಂದು ಗದಗ ಜಿಲ್ಲೆ (ಕ್ಷೇತ್ರಗಳು ನಿಗದಿಯಾಗಿಲ್ಲ). ಡಿ. 25ರಂದು ಹಾವೇರಿ ಜಿಲ್ಲೆಯ ಹಾವೇರಿ, ಬ್ಯಾಡಗಿ ಹಾಗೂ ಶಿಗ್ಗಾವಿ ಮತ್ತು ಹಿರೇಕೆರೂರು.
ಡಿ.26ರಂದು ದಾವಣಗೆರೆ ಜಿಲ್ಲೆಯ ದಾವಣಗೆರೆ, ಹೊನ್ನಾಳಿ ಹಾಗೂ ಹರಪನಹಳ್ಳಿ, ಡಿ.27ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು. ಡಿ.28ರಂದು ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ತುಮಕೂರು. ಡಿ.29ರಂದು ಚಿಕ್ಕಬಳ್ಳಾಪುರ ಜಿಲ್ಲೆ (ಕ್ಷೇತ್ರಗಳು ನಿಗದಿಯಾಗಿಲ್ಲ), ಡಿ.30 ರಂದು ಕೋಲಾರ ಜಿಲ್ಲೆಯ ಕೋಲಾರ, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ. ಜ.2ರಂದು ರಾಮನಗರ ಜಿಲ್ಲೆ, ಜ.3 ರಂದು ಹಾಸನ ಜಿಲ್ಲೆ, ಜ.4 ರಂದು ಚಿಕ್ಕಮಗಳೂರು ಜಿಲ್ಲೆ , ಜ.5 ಶಿವಮೊಗ್ಗ ಜಿಲ್ಲೆ, ಜ. 6 ರಂದು ದಕ್ಷಿಣ ಕನ್ನಡ, ಜ.7 ರಂದು ಉಡುಪಿ ಜಿಲ್ಲೆ. ಜ.8ರಂದು ಉತ್ತರ ಕನ್ನಡ ಜಿಲ್ಲೆ, ಜ.9 ರಂದು ಕೊಡಗು ಜಿಲ್ಲೆ. ಜ.1ರಂದು ಚಾಮರಾಜನಗರ ಜಿಲ್ಲೆ. ಜ.11ರಂದು ಮೈಸೂರು ಜಿಲ್ಲೆ, ಜ.12ರಂದು ಮಂಡ್ಯ ಜಿಲ್ಲೆ, ಜ.13ರಂದು ಬೆಂಗಳೂರು ಗ್ರಾಮಾಂತರ ಮತ್ತು ಜ.14 ಬೆಂಗಳೂರು (ಈ ಜಿಲ್ಲೆಗಳಲ್ಲಿ ಇನ್ನೂ ಕ್ಷೇತ್ರಗಳು ನಿಗದಿಯಾಗಿಲ್ಲ).
