ಬೆಂಗಳೂರು, [ಆ.23]: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣವೆಂದು ಗುರುವಾರ ಇಡೀ ದಿನ ದೇವೇಗೌಡ್ರು ವಾಗ್ದಾಳಿ ನಡೆಸಿದ್ದರು.

ಈ ಆರೋಪದಿಂದ ರೊಚ್ಚಿಗೆದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು [ಶುಕ್ರವಾರ] ಬೆಳಗ್ಗೆಯಿಂದ ಇಡೀ ದಿನ ದೇವೇಗೌಡ್ರ ವಿರುದ್ಧ ಕೆಂಡಕಾರಿದರು. ಬೆಳಗ್ಗೆ ಎದ್ದೇಳುತ್ತಲೇ ಮೊದಲಿಗೆ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ದೇವೇಗೌಡ ಕುಟುಂಬದ ಬಂಡವಾಳವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. 

ಮೈತ್ರಿಯಲ್ಲಿ ಬಿಗ್ ಫೈಟ್; ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗಂಭೀರ ಆರೋಪ

ಇಷ್ಟಕ್ಕೆ ಕಡಿಮೆಯಾಗದ ಸಿದ್ದರಾಮಯ್ಯನವರ ಸಿಟ್ಟು, ಸಾಮಾಜಿಕ ಜಾಲತಾಣಗಳಲ್ಲೂ ಸಹ ದೊಡ್ಡಗೌಡ್ರ ಅಸಲಿ ರಾಜಕೀಯ ಮುಖವಾಡಗಳನ್ವನು ಬಟಾಬಯಲು ಮಾಡಿದರು.

ದೇವೇಗೌಡ್ರನ್ನು ಇಷ್ಟಕ್ಕೆ ಬಿಡದ ಸಿದ್ದರಾಮಯ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿ, 2004ರಲ್ಲಿ ತಮಗೆ ಸಿಎಂ ಪಟ್ಟವನ್ನು ಹೇಗೆ ತಪ್ಪಿಸಿದ್ದರು ಎನ್ನುವುದನ್ನು ಸಾಕ್ಷಿ ಸಮೇತ ದೇವೇಗೌಡ್ರಿಗೆ ತಿವಿದಿದ್ದಾರೆ.

2004ರಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಸಿಗುವ ಎಲ್ಲಾ ಸಾಧ್ಯತೆಗಳಿದ್ದವು. ಅಂದು ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಕೊಡಲು ಮುಂದಾಗಿದ್ದರು. ಆದ್ರೆ ಆ ವೇಳೆ ದೇವೇಗೌಡ್ರು ಹೇಗೆಲ್ಲಾ ಕುತಂತ್ರ ರಾಜಕಾರಣ ಮಾಡಿದ್ದರು ಎನ್ನುವುದನ್ನು ಸಾಕ್ಷಿಗಳ ಸಮೇತ ಫೇಸ್ಬುಕ್ ನಲ್ಲಿ ಹೇಳುವ ಮೂಲಕ ದೇವೇಗೌಡರ ಮುಖಕ್ಕೆ ತಿವಿದಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಏನೆಲ್ಲ ಬರೆದುಕೊಂಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.