ಸಿಡಿ ಇರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ನಾನೂ ಅದನ್ನ ನೋಡಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು(ಡಿ.14): `ಇದೆಲ್ಲ ಶುದ್ಧ ಸುಳ್ಳು, ಇದರ ಹಿಂದೆ ಷಡ್ಯಂತ್ರ ಇದೆ ಎಂದು ಎಚ್.ವೈ. ಮೇಟಿ ಹೇಳಿದ್ದಾರೆ. ಮೇಟಿ ರಾಜೀನಾಮೆ ನೀಡಿದ್ಧಾರೆ. ರಾಜೀನಾಮೆಯನ್ನ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದೇನೆ. ಪ್ರಕರಣ ಕುರಿತಂತೆ ಸಿಐಡಿ ತನಿಖೆ ನಡೆಸುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇವೇಳೆ, ಸಿಡಿ ಇರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ನಾನೂ ಅದನ್ನ ನೊಡಿಲ್ಲ ಎಂದು ಸಿಎಂ ಹೇಳಿದ್ದಾರೆ.