ಕಾಂಗ್ರೆಸ್‌ನ 80 ಶಾಸಕರಿದ್ದರೂ ಜೆಡಿ ಎಸ್ನವರನ್ನು ಮುಖ್ಯಮಂತ್ರಿ ಮಾಡಲಾ ಗಿದೆ. ಹಾಗಾಗಿ ಜೆಡಿಎಸ್  ನಾಯಕರು ಸೋತಿದ್ದರೂ ಇಸ್ತ್ರೀ ಮಾಡಿದ ಬಟ್ಟೆ ಹಾಕಿ ಮಿಂಚುತ್ತಿದ್ದಾರೆ. ನಾವು ಗೆದ್ದಿದ್ದರೂ ಮುಖ್ಯಮಂತ್ರಿ ನಮ್ಮವರಲ್ಲದ ಕಾರಣ ಮಾನಸಿ ಕವಾಗಿ ಕುಗ್ಗಿದ್ದೇವೆ. ಆದರೆ ಅದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ. 

ಚಿಕ್ಕಬಳ್ಳಾಪುರ (ಜೂ. 26): ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಇರುವುದು ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಮಾತ್ರ. ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ತೊಂದರೆಯಾದರೆ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ನ 80 ಶಾಸಕರಿದ್ದರೂ ಜೆಡಿ ಎಸ್ನವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಹಾಗಾಗಿ ಜೆಡಿಎಸ್ ನಾಯಕರು ಸೋತಿದ್ದರೂ ಇಸ್ತ್ರೀ ಮಾಡಿದ ಬಟ್ಟೆ ಹಾಕಿ ಮಿಂಚುತ್ತಿದ್ದಾರೆ. ನಾವು ಗೆದ್ದಿದ್ದರೂ ಮುಖ್ಯಮಂತ್ರಿ ನಮ್ಮವರಲ್ಲದ ಕಾರಣ ಮಾನಸಿ ಕವಾಗಿ ಕುಗ್ಗಿದ್ದೇವೆ. ಆದರೆ ಅದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ, ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗಮನ ಹರಿಸಬೇಕೆಂದರು.