ಗೋಕಾಕ[ಆ.29]: ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿ ರುವ ಮಾಜಿ ಸಿಎಂ ಸಿದ್ದರಾ ಮಯ್ಯ ಅವರು ಬುಧವಾರ ಗೋಕಾಕ ನಗರಕ್ಕೆ ಭೇಟಿ ನೆರೆ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದರು. ಇದೇ ವೇಳೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಲಖನ್ ಜಾರಕಿಹೊಳಿ ಅವರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡು ಗೌಪ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ರಮೇಶ ಜಾರಕಿಹೊಳಿ ಅನರ್ಹ ಗೊಂಡ ನಂತರ ಮೊದಲ ಬಾರಿಗೆ ಅವರ ಸೋದರರನ್ನು ಭೇಟಿ ಮಾಡಿ ಚರ್ಚಿಸಿ ದ್ದಾರೆ. ಮುಂಬರುವ ಉಪಚುನಾವಣೆಗೆ ಈಗಿನಿಂದಲೇ ತಯಾರಿ ಸಿದ್ಧತೆ ಮಾಡಿಕೊ ಳ್ಳುವಂತೆ ಜಾರಕಿಹೊಳಿ ಸಹೋದರರಿಗೆ ಸೂಚ್ಯವಾಗಿ ಹೇಳಿದ್ದಾರೆನ್ನಲಾಗಿದೆ. ಒಂದು ವೇಳೆ ಉಪ ಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಖನ್ ಕಣಕ್ಕೆ ಇಳಿಯುತ್ತಾರೆ ಎಂದು ಈ ಹಿಂದೆ ಸತೀಶ ಜಾರಕಿಹೊಳಿ ಹೇಳಿದ್ದರು. ಈವಿಚಾರವನ್ನು ಸಿದ್ದರಾ ಮಯ್ಯ ಮುಂದೆ ಸತೀಶ ಪ್ರಸ್ತಾಪಿಸಿದ್ದಾರೆ ಎನ್ನಲಾಗು ತ್ತಿದ್ದು, ಇದಕ್ಕೆ ಸಹಮತ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕಣ್ಣೀರಿಟ್ಟ ವೃದ್ಧೆ: ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಸಿದ್ದರಾಮಯ್ಯ ಬೋಜಗಾರ ಗಲ್ಲಿಗೆ ಭೇಟಿ ನೀಡಿದ ವೇಳೆ ವೃದ್ಧೆಯೊಬ್ಬಳು ಸಿದ್ದರಾಮಯ್ಯ ನವರಿಗೆ ಕೈ ಮುಗಿದು ‘ನಮಗೆ ಮನೆ ಇಲ್ಲ. ಮನೆ ಕೊಡಿಸಿ’ ಎಂದು ಕಣ್ಣೀರು ಹಾಕಿದ್ದಾಳೆ. ಈ ವೇಳೆ ಸಿದ್ದರಾಮಯ್ಯ ಮನೆ ಕೊಡಿಸುವುದಾಗಿ ಭರವಸೆ ನೀಡಿ ಸಮಾಧಾನಪಡಿಸಿದರು.