ಸಿದ್ದರಾಮಯ್ಯ ಸೋಲು ಖಚಿತ :ಎಚ್’ಡಿ ಕುಮಾರಸ್ವಾಮಿ

First Published 29, Mar 2018, 11:28 AM IST
Siddaramaiah Loss Election
Highlights

ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದು ಅನುಮಾನವಾಗಿದ್ದು, ಬೇರೆ ಕೆಲವು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರು: ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದು ಅನುಮಾನವಾಗಿದ್ದು, ಬೇರೆ ಕೆಲವು ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸುತ್ತೂರು ಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಈಗ ಚಾಮುಂಡೇಶ್ವರಿ ಯಿಂದ  ಸ್ಪರ್ಧಿಸಿದಲ್ಲಿ ಅವರ ಸೋಲು ಖಚಿತ ಎಂದರು.

ಈ ಹಿಂದೆ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಅವರು 257 ಮತಗಳ ಅಂತರ ದಿಂದ ಗೆದ್ದಿದ್ದರು. ಆಗ ಅವರೊಡನೆ ವಿ.ಶ್ರೀನಿವಾಸಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಎಚ್. ವಿಶ್ವನಾಥ್ ಅವರಂತಹ ನಾಯಕರಿದ್ದರು. ಈಗ ಸ್ಪರ್ಧಿಸಲಿ. ಅವರ ಸೋಲನ್ನು ಇಂದೇ ಬರೆದುಕೊಡುತ್ತೇನೆ. ಸೋಲಿನ ಕುರಿತು ಫಲಿತಾಂಶದ ದಿನದಂದು ನಾನೇ ಬಂದು ವಿಶ್ಲೇಷಣೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಇಲ್ಲಿ ಸೋಲುವ ಭೀತಿಯಿಂದ ಸಿದ್ದರಾಮಯ್ಯ ಅವರು ಬಾದಾಮಿ, ಕೊಪ್ಪಳ ಸೇರಿದಂತೆ ಬೇರೆ ಬೇರೆ ಕಡೆಯೂ ಸಮೀಕ್ಷೆ ಮಾಡಿಸಿದ್ದಾರೆ. ಕಡೆಗೆ ತನ್ವೀರ್‌ಸೇಠ್ ಅವರನ್ನು ರಾಯಚೂರಿಗೆ ಕಳುಹಿಸಿ ತಾನೇ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮೀಕ್ಷೆಯನ್ನೂ ಮಾಡಿಸಿದ್ದಾರೆ. ಅಲ್ಪಸಂಖ್ಯಾತರ ನಾಯಕ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಎಲ್ಲಿಯೂ ಸ್ಪರ್ಧಿಸಲು ಆಗದಿದ್ದರೆ ನರಸಿಂಹ ರಾಜ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂದು ಅವರು ಹೇಳಿದರು

loader