ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬದಲಾವಣೆಗಳಾಗಿವೆ. ುಪ ಮುಖ್ಯಮಂತ್ರಿ ಬಳಿ ಇದ್ದ ಗೃಹ ಖಾತೆ ಎಂ.ಬಿ.ಪಾಟೀಲ್ ಅವರಿಗೆ ವರ್ಗಾವಣೆಯಾಗುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪವರ್ಫುಲ್ ಆಗಿದ್ದಾರೆ. 

ಬೆಂಗಳೂರು : ಡಿಸೆಂಬರ್ 22 ರಂದು ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನೂತನವಾಗಿ 8 ಮುಖಂಡರು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪುಟಕ್ಕೆ ಸೇರ್ಪಡೆಯಾದರು. 

ಈ ವೇಳೆ ಉಪಮುಖ್ಯಮಂತ್ರಿ ಪರಮೇಶ್ವರ್ ಬಳಿ ಇದ್ದ ಗೃಹ ಖಾತೆಯನ್ನು ಎಂ.ಬಿ ಪಾಟೀಲ್ ಅವರಿಗೆ ವಹಿಸಲಾಯ್ತು. ಈ ಬೆಳವಣಿಗೆಯ ಬಳಿಕ ಇದೀಗ ಮಾಜಿ ಸಿಎಂ‌ ಸಿದ್ದರಾಮಯ್ಯ ಪವರ್ ಫುಲ್ ಆಗಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಪ್ರಭಾವಿ ವ್ಯಕ್ತಿಗಳಿಗೆ ನೀಡುವ ಜೆಡ್ ಭದ್ರತೆ ನೀಡಲು ನೂತನ ಗೃಹ ಸಚಿವರು ಆದೇಶ ನೀಡಿದ್ದಾರೆ.

ಗೃಹ ಸಚಿವರ ಬದಲಾವಣೆ ನಂತರ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಾಲ್ಕು ಎಸ್ಕಾರ್ಟ್ ವಾಹನದ ಜೊತೆಗೆ ಜಾಮರ್ ವಾಹನದ ಭದ್ರತಾ ಬೆಂಗಾವಲು ಪಡೆಯನ್ನು ನೀಡಲಾಗಿದೆ.

ಅಲ್ಲದೇ ಮೈಸೂರಿನ ನಿವಾಸಕ್ಕೆ ಶ್ವಾನ ದಳದ ತಪಾಸಣೆ ಸೇರಿದಂತೆ ಹೆಚ್ಚಿನ ಸೆಕ್ಯೂರಿಟಿಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಮೌಖಿಕ ಆದೇಶ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಭಾವಿ ವ್ಯಕ್ತಿಗಳ ಭದ್ರತಾ ಸ್ಥಾನಮಾನ ಸಿದ್ದರಾಮಯ್ಯಗೆ ದೊರಕಿದಂತಾಗಿದೆ. 

ಖಾತೆ ಬದಲಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚು ಪವರ್ಫುಲ್ ಆಗಿದ್ದಾರೆ.