ಡ್ಯಾಮ್ ಕಟ್ಟಿದೋರು ನಾವು. ಆದರೆ, ನಮ್ಮನ್ನ ಕಾವೇರಿ ವಿಚಾರದಲ್ಲಿ ವಿಲನ್ ಥರಾ ನೋಡುತ್ತಿದ್ದಾರೆ.

ಬೆಂಗಳೂರು(ಅ.02): ಡ್ಯಾಮ್ ಕಟ್ಟಿದೋರು ನಾವು. ಆದರೆ, ನಮ್ಮನ್ನ ಕಾವೇರಿ ವಿಚಾರದಲ್ಲಿ ವಿಲನ್ ಥರಾ ನೋಡುತ್ತಿದ್ದಾರೆ. ಕೆಆರ್​​​​​ಎಸ್​​ ಕಟ್ಟಲು ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ. ಆದರೆ, ನಾವೇ ಬಲಿಪಶುಗಳಾಗುತ್ತಿ ದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಕಾವೇರಿ ವಿಚಾರದಲ್ಲಿ ವಿಲನ್ ಆಗಿದ್ದೇವೆ, ನಮ್ಮ ಸಂಕಷ್ಟ ಮಾತ್ರ ಕೋರ್ಟ್​​ಗೆ ಅರ್ಥವಾಗ್ತಿಲ್ಲ. ನೀರು ಬಿಡಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಈಗ ಇರೋದು ಗಾಂಧಿ ತತ್ವದಡಿ ಅಹಿಂಸಾ ಹೋರಾಟ ಎಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇವೇಳೆ, ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ, ಗೌರವವಿದೆ. ಆದರೆ, ಜನಸಾಮಾನ್ಯರ ಬದುಕಿಗಾಗಿ ನೀರು ಬೇಕು ಎಂದಿದ್ದಾರೆ.