ಹುಬ್ಬಳ್ಳಿ, [ಏ.29]: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವೇರಿದ್ದು, ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸಿದೆ.

ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಇಂದು [ಸೋಮವಾರ] ಹುಬ್ಬಳ್ಳಿಯ‌ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಮುಖಂಡರ‌ ಮಹತ್ವದ ಸಭೆ ನಡೆಸಿದರು.

ಚಿಂಚೋಳಿ, ಕುಂದಗೋಳ ಉಪಚುನಾವಣೆ ಗೆಲುವಿಗಾಗಿ ‘ಕೈ’ ಉಸ್ತುವಾರಿಗಳ ನೇಮಕ

ಕುಂದಗೋಳ‌ ಕ್ಷೇತ್ರವನ್ನು ಗೆಲ್ಲಲು ಸಭೆಯಲ್ಲಿ ಹಲವು ರಣತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಹಾಗಿದ್ರೆ ಸಭೆಯಲ್ಲಿ ಸಿದ್ದು ರೂಪಸಿದ ರಣತಂತ್ರಗಳೇನು? ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ.

* ಕೂಂದಗೋಳದ ನಾಲ್ಕು ಜಿಲ್ಲಾ ಪಂಚಾಯತಿಗಳಿಗೆ ತಲಾ ಒಬ್ಬ ಸಚಿವರ ಉಸ್ತುವಾರಿ.
* 26 ಗ್ರಾಮ ಪಂಚಾಯಿತಿ, 15 ತಾಲ್ಲೂಕು ಪಂಚಾಯಿತಿಗಳಿಗೆ ಓರ್ವ ಶಾಸಕರಿಗೆ ಉಸ್ತುವಾರಿ. 
* ಕುರುಬ, ಲಿಂಗಾಯತ, ಮುಸ್ಲೀಮ್, ದಲಿತ ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಆಯಾ ಸಮಾಜದ ನಾಯಕರಿಗೆ ಜವಾಬ್ದಾರಿ.
* ಸ್ಥಳೀಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಸೂಚನೆ.
* ಟಿಕೆಟ್ ಕೈತಪ್ಪಿ ಅತೃಪ್ತಿಗೊಂಡವರನ್ನು ಕರೆಸಿ ಮಾತನಾಡಲು ನಿರ್ಧಾರ.
* ಯಾವುದೇ ಕಾರಣಕ್ಕೂ ಕ್ಷೇತ್ರ ಕೈತಪ್ಪದಂತೆ ಜಾಗೃತಿ ವಹಿಸಲು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಸೂಚನೆ.

ಸಿದ್ದರಾಮಯ್ಯ ನೀಡಿದ ಸೂಚನೆಗಳಂತೆ ಸಚಿವರು ಮತ್ತು ಶಾಸಕರ ಪಡೆ ನಾಳೆಯಿಂದಲೇ [ಮಂಗಳವಾರ] ಅಖಾಡಕ್ಕೆ ಇಳಿಯಲಿವೆ. 

ಸಭೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಂಸದ ಐ.ಜಿ.ಸನದಿ, ಶಾಸಕ ಪ್ರಸಾದ್ ಅಬ್ಬಯ್ಯ, ವಿನಯ ಕುಲಕರ್ಣಿ, ಎಚ್.ಕೆ. ಪಾಟೀಲ್, ಭೈರತಿ ಸುರೇಶ, ಎಚ್.ವೈ. ಮೇಟಿ, ವೀರಣ್ಣ ಮತ್ತಿಕಟ್ಟಿ ಉಪಸ್ಥಿತರಿದ್ದರು.

 ಕಾಂಗ್ರೆಸ್ ನಿಂದ ಕುಸುಮಾ ಶಿವಳ್ಳಿ ಕಣದಲ್ಲಿದ್ದು, ಬಿಜೆಪಿಯಿಂದ ಚಿಕ್ಕನಗೌಡ ಅವರು ಅಖಾಡದಲ್ಲಿದ್ದಾರೆ. ಇನ್ನು ಮೇ 19 ರಂದು ಕುಂದಗೋಳ ಕ್ಷೇತಕ್ಕೆ ಮತದಾನ ನಡೆಯಲಿದ್ದು, ಮೇ. 23 ಫಲಿತಾಂಶ ಹೊರಬೀಳಲಿದೆ.

ನನಗೂ ರಾಜಕೀಯ ಗೊತ್ತು: ವಿರೋಧಿಗಳ ಬಾಯಿ ಮುಚ್ಚಿಸಿದ ಕುಸುಮಾ

"