ಮೋದಿ ಕಾರ್ಯಕ್ರಮಕ್ಕೆ ಸಿಎಂ'ಗೆ ಆಹ್ವಾನ

First Published 17, Feb 2018, 6:19 PM IST
Siddaramaiah attend narendra Modi Function at Mysore
Highlights

ಬೆಂಗಳೂರು-ಮೈಸೂರು ಡಬ್ಲಿಂಗ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹ್ವಾನಿಸಲಾಗಿದೆ.

ಮೈಸೂರು(ಫೆ.17): ಸಾಂಸ್ಕೃತಿಕ ನಗರಿಯಲ್ಲಿ ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಬೆಂಗಳೂರು-ಮೈಸೂರು ಡಬ್ಲಿಂಗ್ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹ್ವಾನಿಸಲಾಗಿದೆ.

ಭಾನುವಾರ ರಾತ್ರಿ ಸಿಎಂ ಅವರು ಮೈಸೂರಿಗೆ ಆಗಮಿಸಿ ಪ್ರಧಾನಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಫೆ.19ರ ಮಧ್ಯಾಹ್ನ ಬೆಂಗಳೂರು - ಮೈಸೂರು ವಿಧ್ಯುದೀಕರಣ ಕಾಮಗಾರಿಯಲ್ಲಿ ಕೂಡ ಭಾಗಿಯಾಗಲಿದ್ದಾರೆ ಎಂದು ಸಿಎಂ ಕಚೇರಿಯಿಂದ ಹೊರಡಿಸಿದ ಪ್ರವಾಸ ಕಾರ್ಯಕ್ರಮದಲ್ಲಿ ಸಿಎಂ ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಂಚಾರ ಮಾರ್ಗ ಬದಲಾವಣೆ

ಮೈಸೂರಿಗೆ ಮೋದಿ ಆಗಮನದ ಹಿನ್ನಲೆಯಲ್ಲಿ ಫೆ.18. ರ ರಾತ್ರಿ 10 ಗಂಟೆಯಿಂದ 19ರ ಸಂಜೆ ವರೆಗೆ ನಗರದ ಹಲವು ಮಾರ್ಗಗಳಲ್ಲಿ ಸಾರ್ವಜನಿಕ ಸಂಚಾರ ಮಾರ್ಗವನ್ನು ಪೊಲೀಸರು ಬದಲಾಯಿಸಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ರೇಸ್ ಕೋರ್ಸ್ ರಸ್ತೆವರೆಗೆ 200 ಮೀಟರ್ ಅಂತರದಲ್ಲಿ ಎಲ್ಲಾ ಮಾದರಿ ವಾಹನಗಳ ನಿರ್ಬಂಧಿಸಲಾಗಿದೆ. ಫೆ 18. ರಾತ್ರಿ 8:30 ರಿಂದ ಮಧ್ಯರಾತ್ರಿವರೆಗೆ ಹಾಗೂ 19 ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಲಲಿತ ಮಹಲ್ ಹೆಲಿಪ್ಯಾಡ್'ವರೆಗೆ 200 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳಿಗೆ ನಿರ್ಬಂಧಿಸಲಾಗಿದೆ.

ಫೆ.18 ರ ರಾತ್ರಿ 8 ಗಂಟೆಯಿಂದ 19 ಮಧ್ಯಾಹ್ನ 1 ಗಂಟೆವರೆಗೆ ಲಲಿತ ಮಹಲ್ ರಸ್ತೆ, ರೈಸ್ ಕೋರ್ಸ್,  ರ್ಯಾಡಿಸನ್ ಬ್ಲೂ ವರೆಗೆ ಎಲ್ಲಾ ರೀತಿಯ ಪ್ರಾಣಿಗಳಿಗೂ ತಡೆ ನೀಡಲಾಗಿದೆ.

ಫೆ 19 ರಂದು ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ಮೆಟ್ರಪೋಲ್, ರೈಲ್ವೆಗೇಟ್, ನಂಜನಗೂಡು ರಸ್ತೆ,ಮಂಡಕಳ್ಳಿ ವಿಮಾನ ನಿಲ್ದಾಣದ ವರೆಗೆ 200 ಮೀಟರ್ ಅಂತರದಲ್ಲಿ ವಾಹನ ನಿಲುಗಡೆ ನಿರ್ಬಂಧ. ರೈಲ್ವೆ ನಿಲ್ದಾಣದಲ್ಲಿ ಮೋದಿ ಕಾರ್ಯಕ್ರಮ ಮುಗಿಯುವವರೆಗೆ ಪಾರ್ಕಿಂಗ್ ಇರುವುದಿಲ್ಲ.

loader