ನಮೋ ಆ್ಯಪ್‌ ಬಳಿಕ ಸಿದ್ದರಾಮಯ್ಯ ಆ್ಯಪ್‌ ವಿವಾದದಲ್ಲಿ; ಬಳಕೆದಾರರ ಮಾಹಿತಿ ಸೋರಿಕೆ?

First Published 29, Mar 2018, 8:29 PM IST
Siddaramaiah App Removed After Alleged Data Sharing
Highlights
  • ಕೆಂಬ್ರಿಡ್ಜ್ ಅನಾಲಿಟಿಕಾ ಹಾಗೂ ನಮೋ ಆ್ಯಪ್‌’ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆ
  • ಸಿದ್ದರಾಮಯ್ಯ’ರ ಆ್ಯಪ್‌’ನಿಂದಲೂ ಬಳಕೆದಾರರ ಮಾಹಿತಿ ಸೋರಿಕೆ

ಬೆಂಗಳೂರು: ಕೆಂಬ್ರಿಡ್ಜ್ ಅನಾಲಿಟಿಕಾ ಹಾಗೂ ನಮೋ ಆ್ಯಪ್‌’ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ’ರ ಆ್ಯಪ್‌’ನಿಂದಲೂ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆಯೆಂದು ಹೇಳಲಾಗಿದೆ.

ಸಿದ್ದರಾಮಯ್ಯ ಆ್ಯಪ್‌ ನನ್ನ ಹೆಸರು, ಮೊಬೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ವಿವರಗಳನ್ನು ಮೈಸೂರಿನ  ಇನ್ಫೋ’ಪೈನ್ ಎಂಬ ಕಂಪನಿಗೆ ರವಾನಿಸಿದೆ ಎಂದು ಶ್ರೀಹರ್ಷ ಪೆರ್ಲಾ ಎಂಬವರು ಟ್ವೀಟಿಸಿದ್ದಾರೆ.

ಸಿದ್ದರಾಮಯ್ಯ ಆ್ಯಪ್‌’ನ್ನು ಅಭಿವೃದ್ಧಿಪಡಿಸಿದ್ದು ಇದೇ ಇನ್ಫೋ’ಪೈನ್ ಕಂಪನಿ. ಸುಮಾರು 30 ಸಾವಿರ ಮಂದಿ ಈ ಆ್ಯಪ್‌’ನ್ನು ಡೌನ್’ಲೋಡ್ ಮಾಡಿಕೊಂಡಿದ್ದಾರೆ.

ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಆ್ಯಪ್‌’ನ್ನು ಸ್ಥಗಿತಗೊಳಿಸಲಾಗಿದೆ.

loader