ತುಮ​ಕೂರು :  ತುಮ​ಕೂ​ರಿನ ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ 64ನೇ ಮಹಾಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶತಾ​ಯುಷಿ ಡಾ. ಶಿವ​ಕು​ಮಾರ ಸ್ವಾಮೀಜಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲ​ಕ ಮಾತನಾಡಿ ಅಚ್ಚರಿ ಮೂಡಿ​ಸಿ​ದರು.

ಪ್ರತಿವರ್ಷ ನಡೆ​ಯುವ ಹಳೆ ವಿದ್ಯಾ​ರ್ಥಿ​ಗಳ ಹಾಗೂ ಹಿತೈ​ಷಿ​ಗಳ ಸಂಘದ ಸಭೆಯ ಅಧ್ಯ​ಕ್ಷ​ತೆ​ಯ​ನ್ನು ಸಿದ್ಧಗಂಗಾ ಶ್ರೀಗಳೇ ವಹಿಸಿದ್ದರು. ಶಸ್ತ್ರಚಿಕಿ​ತ್ಸೆಗೆ ಒಳ​ಗಾ​ಗಿರುವ ಕಾರಣ ಶ್ರೀಗಳು ಸಭೆಗೆ ಬರಲು ಸಾಧ್ಯ​ವಾ​ಗ​ಲಿಲ್ಲ. ಆದರೆ, ತಾವು ವಿಶ್ರಾಂತಿ ತೆಗೆ​ದು​ಕೊ​ಳ್ಳು​ತ್ತಿ​ರುವ ಹಳೆ ಮಠ​ದಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿದ್ಯಾ​ರ್ಥಿ​ಗ​ಳಿಗೆ ಶುಭ ಹಾರೈಸಿದರು.

ಸುಮಾರು 1 ನಿಮಿ​ಷ​ ಮಾತ​ನಾ​ಡಿದ ಶ್ರೀಗಳು ವಚ​ನ​ವೊಂದನ್ನು ಉಲ್ಲೇಖಿಸಿ ಮಾತು ಮುಗಿ​ಸಿ​ದರು. ವಿಡಿಯೋ ಪರದೆ ಮೇಲೆ ಶ್ರೀಗಳು ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾರ್ಥಿಗಳ ಸಂಭ್ರಮ ಹೇಳತೀರದಾಗಿತ್ತು. ಕರತಾಡನ ಮಾಡಿ, ಸಂತಸ ವ್ಯಕ್ತಪಡಿಸಿದರು.

ಆರೋಗ್ಯ ಚೇತ​ರಿಕೆ:  ಈ ಮಧ್ಯೆ ಶ್ರೀಗಳು ಚೆನ್ನೈ​ನ ರೆಲಾ ಆಸ್ಪ​ತ್ರೆ​ಯಿಂದ ಡಿಸ್ಚಾಜ್‌ರ್‍ ಆಗಿ 5 ದಿವ​ಸ ಕಳೆ​ದಿದ್ದು, ಅವರ ಆರೋ​ಗ್ಯ​ದಲ್ಲಿ ಮತ್ತಷ್ಟುಚೇತ​ರಿಕೆ ಕಂಡು ಬಂದಿದೆ.