ತಾಯಿಯ ಎದೆಹಾಲನ್ನು ‘ಗ್ರೀನ್‌ ಕಾರಿಡಾರ್‌'ನಲ್ಲಿ ಸಾಗಿಸಿ, ಸಾಕಷ್ಟುಅಶಕ್ತ ಮಕ್ಕಳಿಗೆ ಉಣಿಸಿದ ಮಾನವೀಯ ಪ್ರಸಂಗ ರಾಜಸ್ಥಾನದಲ್ಲಿ ಬುಧವಾರ ನಡೆದಿದೆ. ಈ ರೀತಿ ತಾಯಿಯ ಎದೆಹಾಲನ್ನು ಟ್ರಾಫಿಕ್‌ ಮತ್ತು ಸಿಗ್ನಲ್‌ ಮುಕ್ತ ಮಾರ್ಗವಾದ ‘ಗ್ರೀನ್‌ ಕಾರಿಡಾರ್‌'ನಲ್ಲಿ ಸಾಗಿಸಿದ್ದು ದೇಶದಲ್ಲೇ ಮೊದಲ ಬಾರಿ.

ಜೈಪುರ(ಜೂ.02): ತಾಯಿಯ ಎದೆಹಾಲನ್ನು ‘ಗ್ರೀನ್‌ ಕಾರಿಡಾರ್‌'ನಲ್ಲಿ ಸಾಗಿಸಿ, ಸಾಕಷ್ಟುಅಶಕ್ತ ಮಕ್ಕಳಿಗೆ ಉಣಿಸಿದ ಮಾನವೀಯ ಪ್ರಸಂಗ ರಾಜಸ್ಥಾನದಲ್ಲಿ ಬುಧವಾರ ನಡೆದಿದೆ. ಈ ರೀತಿ ತಾಯಿಯ ಎದೆಹಾಲನ್ನು ಟ್ರಾಫಿಕ್‌ ಮತ್ತು ಸಿಗ್ನಲ್‌ ಮುಕ್ತ ಮಾರ್ಗವಾದ ‘ಗ್ರೀನ್‌ ಕಾರಿಡಾರ್‌'ನಲ್ಲಿ ಸಾಗಿಸಿದ್ದು ದೇಶದಲ್ಲೇ ಮೊದಲ ಬಾರಿ.

ಈವರೆಗೆ ಅಂಗಾಂಗಗಳನ್ನು ಗ್ರೀನ್‌ ಕಾರಿ ಡಾರ್‌ನಲ್ಲಿ (ಟ್ರಾಫಿಕ್‌ ಮುಕ್ತ ರಸ್ತೆ) ಸಾಗಿಸಿದ ನಿದರ್ಶನಗಳುಂಟು. ಆದರೆ ರಾಜಸ್ಥಾನದಲ್ಲಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಭಿಲ್ವಾರಾ ಜಿಲ್ಲೆಯಿಂದ ಅಜ್ಮೇರ್‌ವರೆಗೆ 62 ಲೀಟರ್‌ ತಾಯಿಯ ಎದೆಹಾಲನ್ನು ಬುಧ ವಾರ 150 ಕಿ.ಮೀ. ದೂರದಷ್ಟುಸಾಗಿಸಲಾ ಯಿತು. ಈ ಎದೆಹಾಲನ್ನು ತಾಯಿಯ ಎದೆಹಾಲು ತುರ್ತಾಗಿ ಬೇಕಾಗಿದ್ದ ಅಜ್ಮೇರ್‌ನ ನವಜಾತ ಶಿಶುಗಳಳಿಗೆ ಉಣಿಸಿ ಪ್ರಾಣರಕ್ಷಣೆ ಮಾಡಲಾಯಿತು.

ಅಜ್ಮೇರ್‌ನ ಆಸ್ಪತ್ರೆಯೊಂದರಲ್ಲಿ ತಾಯಿಯ ಎದೆಹಾಲು ಕಡಿಮೆ ಇರುವ ಕೆಲವು ಮಕ್ಕಳು ಜನಿಸಿದ್ದವು. ಇದೇ ವೇಳೆ ಎದೆಹಾಲು ಹೆಚ್ಚಿದ್ದ ತಾಯಂದಿರು ಭಿಲ್ವಾರಾದಲ್ಲಿ ಇರುವ ಮಾಹಿತಿ ತಿಳಿದುಬಂತು. ಕೂಡಲೇ ಸರ್ಕಾರದ ವರಿಗೆ ಮಾಹಿತಿ ರವಾನಿಸಿ ಭಿಲ್ವಾರಾದಿಂದ ಎದೆಹಾಲು ತರಿಸಿಕೊಳ್ಳಲು ತೀರ್ಮಾನಿಸಲಾ ಯಿತು. ಆ್ಯಂಬುಲೆನ್ಸ್‌ನಲ್ಲಿ -20 ಡಿಗ್ರಿ ಉಷ್ಣಾ ಂಶದಲ್ಲಿ 62 ಲೀ. ಎದೆಹಾಲು ಶೇಖರಿಸಿದ ವೈದ್ಯರು ಪೊಲೀಸ್‌ ಬೆಂಗಾವಲಿನಲ್ಲಿ ಭಿಲ್ವಾ ರಾದಿಂದ 150 ಕಿ.ಮೀ. ದೂರದ ಅಜ್ಮೇರ್‌ಗೆ ಸಾಗಿದರು. ಆ್ಯಂಬುಲೆನ್ಸ್‌ ಸಾಗುವಾಗ ರಸ್ತೆಗಳನ್ನು ಸಿಗ್ನಲ್‌ ಮುಕ್ತ, ಟ್ರಾಫಿಕ್‌ ಮುಕ್ತಗೊಳಿಸಲಾಗಿತ್ತು. ಟೋಲ್‌ ಪ್ಲಾಜಾದಲ್ಲಿ ತುರ್ತು ದ್ವಾರದ ಮೂಲಕ ಅಡೆತಡೆಯಿಲ್ಲದೇ ವಾಹನ ಸಂಚರಿಸಿತು. ಹೀಗಾಗಿ ಸುಮಾರು 4 ತಾಸು ಪ್ರಯಾಣದ ಹಾದಿಯಾದ ಭಿಲ್ವಾರಾ-ಅಜ್ಮೇರ್‌ ಮಾರ್ಗ ದಲ್ಲಿ ಆ್ಯಂಬುಲೆನ್ಸು ಕೇವಲ 2 ತಾಸಿನಲ್ಲಿ ಪ್ರಯಾಣ ಪೂರ್ಣಗೊಳಿಸಿತು.

ರಾಜಸ್ಥಾನದಲ್ಲಿ ನವಜಾತ ಶಿಶು ಮರಣ ಪ್ರಮಾಣ (100ಕ್ಕೆ 35) ಅತಿ ಹಚ್ಚಿದೆ. ಇದು ದೇಶದ ಪ್ರಮಾಣಕ್ಕಿಂತ (1000ಕ್ಕೆ 29) ಅಧಿಕ. ನವಜಾತ ಶಿಶುಗಳಿಗೆ ತಾಯಿಯ ಹಾಲು ಸಿಕ್ಕರೆ ಶಿಶುಮರಣ ಪ್ರಮಾಣ ಶೇ.16ರಿಂದ 22ರಷ್ಟುತಗ್ಗುತ್ತದೆ.