ಫೋಟೋ ಕೃಪೆ: ಇಂಡಿಯನ್ ಎಕ್ಸಪ್ರೆಸ್

ಆದಿಲಾಬಾದ್(ಜು.27): ಅದ್ಯಾಕೆ ಕರೆಂಟ್ ಮುಟ್ಟಿದ ಕಾಗೆ ತರಾ ಆಡ್ತಿಯಾ ..? ಅಂತಾ ಗಡಿಬಿಡಿಯಲ್ಲಿ ಇರುವವರನ್ನು ನಾವು ನೀವೆಲ್ಲ ಆಡಿ ಕೊಳ್ಳುವುದುಂಟು. ಕರೆಂಟ್ ಮುಟ್ಟಿದರೆ ಸಾಮಾನ್ಯ ಮನುಷ್ಯರಿಗೆ ಸಿಗುವ ಶಾಕ್ ಎಂತದ್ದು ಎಂಬುದು ಈ ಮಾತಿನಿಂದಲೇ ತಿಳಿಯುತ್ತದೆ.

ಆದರೆ ತೆಲಂಗಾಣದ ಈ ಅಣ್ಣ ತಂಗಿಯರು ಮಾತ್ರ ಈ ಮಾತಿಗೆ ಅಪವಾದ. ಇವರು ಕರೆಂಟ್ ಮುಟ್ಟೋದು ಬೇಡ ವಿದ್ಯುತ್ ಬಲ್ಬ್’ಗಳು ಇವರನ್ನು ಮುಟ್ಟಿದರೆ ಸಾಕು,  ತಂತಾನೆ ಹೊತ್ತಿಕೊಳ್ಳುತ್ತವೆ.

ಹೌದು, ತೆಲಣಗಾಣದ ಆದಿಲಾಬಾದ್ ಜಿಲ್ಲೆಯ ಸಿರಿಸನ ಗ್ರಾಮದ ಸಮೀರ್ ಹಾಗೂ ಸಾನಿಯಾ ದೇಹಕ್ಕೆ ಎಲ್’ಇಡಿ ಬಲ್ಬ್ ಇಟ್ಟರೆ ಸಾಕು ಹೊತ್ತಿಕೊಳ್ಳುತ್ತದೆ.

ಸಮೀರ್ ಹಾಗೂ ಸಾನಿಯಾ ತಮ್ಮ ಈ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಈ ಅದ್ಭುತವನ್ನು ನೋಡಲು ಸುತ್ತಮುತ್ತಲಿನ ಗ್ರಾಮದಿಂದಲೂ ಜನ ಬರುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಮೀರ್ ಹಾಗೂ ಸಾನಿಯಾ ತಂದೆ ಚಾಂದ್ ಪಾಶಾ, ತಮ್ಮ ಮಕ್ಕಳ ದೇಹದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅವರ ದೇಹಕ್ಕೆ ಎಲ್’ಇಡಿ ಬಲ್ಬ್ ಇಟ್ಟರೆ ತಂತಾನೆ ಹೊತ್ತಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ. ಇದೇ ಕಾರಣಕ್ಕೆ ವಿದ್ಯುತ್’ನ್ನೇ ಕಾಣದ ಚಾಂದ್ ಪಾಶಾ ಮನೆಗೆ ಮಕ್ಕಳೇ ತಮದ್ಮ ದೇಹದ ಮೂಲಕ ಬೆಳಕು ನೀಡುತ್ತಿದ್ದಾರೆ.

ಆದರೆ ಇದನ್ನು ಸುಳ್ಳು ಸುದ್ದಿ ಎಂದು ಪ್ರತಿಪಾದಿಸಿರುವ ವಿದ್ಯುತ್ ಇಲಾಖೆ ಅಧಿಕಾರಿಗಳು, ತಮ್ಮ ವಾದಕ್ಕೆ ಪುಷ್ಠಿಯನ್ನೂ ನೀಡಿಲ್ಲ.