ಚೆನ್ನೈ[ಜು.27]: ಜನ ಸಾಮಾನ್ಯರು ಸೇಫ್ಟಿಗಾಗಿ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಯಮ ಉಲ್ಲಂಘಿಸಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕರೆ ದಂಡ ಗ್ಯಾರೆಂಟಿ. ಹೀಗಾಗಿ ಬಹುತೇಕರು ಟ್ರಾಫಿಲ್ ನಿಯುಮ ಪಾಲಿಸುತ್ತಾರೆ. ಆದರೆ ಕೆಲವೊಮ್ಮೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ನಿಯಮ ಉಲ್ಲಂಘಿಸುವುದು ನಮ್ಮ ಕಣ್ಣಿಗೆ ಬೀಳುತ್ತದೆ. ಹೀಗಿರುವಾಗ ಈ ನಿಯಮಗಳು ಕೇವಲ ಜನ ಸಾಮಾನ್ಯರಿಗಷ್ಟೇ ಸೀಮಿತವೇ? ಎಂದು ಗೊಣಗುವುದುಂಟು. ಆದರೀಗ ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪೊಲೀಸ್ ಅಧಿಕಾರಿಯನ್ನು ಇಲಾಖೆ ಅಮಾನತ್ತು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಹೌದು ಹೆಲ್ಮೆಟ್ ಧರಿಸದೇ ರಾಜಾರೋಷವಾಗಿ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರನ್ನು ಚೆನ್ನೈ ಸಿಟಿ ಪೊಲೀಸ್ ಅಮಾನತ್ತುಗೊಳಿಸಿದೆ. ಶುಕ್ರವಾರದಂದು ಕರ್ತವ್ಯದಲ್ಲಿದ್ದ ಮಾಂಬಳಮ್ ಪೊಲೀಸ್ ಠಾಣೆಯ ಎಸ್‌ಐ ಎಸ್ ಮದನ್ ಕುಮಾರ್ ಹೆಲ್ಮೆಟ್ ಧರಿಸದೇ ಬೇಜವಾಬ್ದಾರಿಯಿಂದ ಬೈಕ್ ಚಲಾಯಿಸುತ್ತಿದ್ದ ಫೋಟೋವನ್ನು ಸಾರ್ವಜನಿಕರೊಬ್ಬರು ಮೊಬನೈಲ್‌ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಇದನ್ನು ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಎಕೆ ವಿಶ್ವನಾಥನ್‌ರಿಗೆ ಕಳುಹಿಸಿದ್ದರು.

ಭಾರೀ ಟ್ರಾಫಿಕ್ ದಂಡ: ಮೊದಲ ದಿನವೇ ವಿಫಲ, ಹಳೆಯ ದರದಲ್ಲೇ ದಂಡ!

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಕೂಡಲೇ ಈ ಫೋಟೋವನ್ನು ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ಸಿ. ಮಹೇಶ್ವರಿಯವರಿಗೆ ಕಳುಹಿಸಿದ್ದಾರೆ. ಇದನ್ನು ಗಮನಿಸಿದ ಜಂಟಿ ಆಯುಕ್ತರು ನಿಯಮ ಉಲ್ಲಂಘಿಸಿದ ಎಸ್‌ಐ ವಿರುದ್ಧ ಕ್ರಮ ಕೈಗೊಂಡ ಜಂಟಿ ಆಯುಕ್ತ ಅಮಾನತ್ತು ಪತ್ರವನ್ನು ಕಳುಹಿಸಿದ್ದಾರೆ.

'ಜೂನ್ 28ರಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶ ಹಾಗೂ ಜುಲೈ 4 ರಂದು ಡಿಜಿಪಿ ಹೊರಡಿಸಿದ್ದ ಪ್ರಕಟಣೆಯಲ್ಲಿ ಪೊಲೀಸ್ ಅಧಿಕಾರಿಗಳು ಕೂಡಾ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿತ್ತು. ಆದರೆ ನೀವು ಇದನ್ನು ಪಾಲಿಸದೆ ನಿಯಮ ಉಲ್ಲಂಘಿಸಿದ್ದೀರಿ' ಎಂದು ಎಸ್‌ಐಗೆ ನೀಡಲಾದ ಅಮಾನತ್ತು ಪತ್ರದಲ್ಲಿ ಉ್ಲಲೇಖಿಸಲಾಗಿದೆ.

ಈ ಹಿಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗಳಿಗೆ ಚಲನ್ ನೀಡಿ ದಂಡ ಭರಿಸುವಂತೆ ಸೂಚಿಸಲಾಗುತ್ತಿತ್ತು. ಅಲ್ಲದೇ ನಿಯಮ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ಆದರೀಗ ಹೆಲ್ಮೆಟ್ ಧರಿಸುವ ಕಾನೂನು ಉಲ್ಲಂಘಿಸಿದ ಅಧಿಕಾರಿಯನ್ನು ಅಮಾನತ್ತಿನತ್ತುಗೊಳಿಸಿದ್ದು ದೇಶದಲ್ಲಿ ಇದೇ ಮೊದಲು.

ಭಾರೀ ಟ್ರಾಫಿಕ್ ದಂಡ: ಮೊದಲ ದಿನವೇ ವಿಫಲ, ಹಳೆಯ ದರದಲ್ಲೇ ದಂಡ!

ಜೂನ್ 7ರಂದು ಚೆನ್ನೈ ಟ್ರಾಫಿಕ್ ಪೊಲೀಸರು GCTP ಹೆಸರಿನ ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆಗೊಳಿಸಿದ್ದರು. ಈ ಆ್ಯಪ್ ಬಳಕೆದಾರರು ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಫೋಟೋ ಕ್ಲಿಕ್ಕಿಸಿ ಟ್ರಾಫಿಕ್ ಪೊಲೀಸರ ಗಮನಕ್ಕೆ ತರಬಹುದಿತ್ತು. ಈ ಆ್ಯಪ್ ಬಿಡುಗಡೆಗೊಂಡ ಬಳಿಕ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಸುಮಾರು 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳಲ್ಲಿ ಹೇಳಕಲಾಗಿದೆ. ಇದಾದ ಬಳಿಕ ಜುಲೈ 4 ರಂದು ಚೆನ್ನೈ ಡಿಜಿಪಿ ಜೆ. ಕೆ ತ್ರಿಪಾಠಿ ಎಲ್ಲಾ ಪೊಲೀಸ್ ಅಧಿಕಾರಿಗಳು ಟ್ರಾಫಿಕ್ ನಿಯಮ ಪಾಲಿಸಬೇಕೆಂದು ಸೂಚಿಸಿ ಪೊಲೀಸ್ ಠಾಣೆಗಳಿಗೆ ಪ್ರಕಟಣೆ ಹೊರಡಿಸಿದ್ದರು. ಅಲ್ಲದೇ ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆಂದು ಸೂಚಿಸಿದ್ದರು.