ತಮಿಳುನಾಡಿನಲ್ಲಿ ಬೈಕ್ ಸವಾರನ ಮೇಲೆ ಪೊಲೀಸ್ ಅಧಿಕಾರಿ ದರ್ಪ ತೋರಿದ್ದು, ಇದಕ್ಕೆ ಗರ್ಭಿಣಿ ಬಲಿಯಾದ ಅಮಾನವೀಯ ಘಟನೆ ನಡೆದಿದೆ.

ಆನೇಕಲ್ : ತಮಿಳುನಾಡಿನಲ್ಲಿ ಬೈಕ್ ಸವಾರನ ಮೇಲೆ ಪೊಲೀಸ್ ಅಧಿಕಾರಿ ದರ್ಪ ತೋರಿದ್ದು, ಇದಕ್ಕೆ ಗರ್ಭಿಣಿ ಬಲಿಯಾದ ಅಮಾನವೀಯ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ತಿರುಚಿಯಲ್ಲಿ ನಿನ್ನೆ ರಾತ್ರಿ ಬೈಕ್ ಸವಾರ ರಾಜು ಪತ್ನಿ ಉಷಾರೊಂದಿಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ಅಡ್ಡಗಟ್ಟಿದ ಎಸ್ಐ ಕಾಮರಾಜು ಹೆಲ್ಮೆಟ್ ಧರಿಸಿಲ್ಲ ಎಂದು 100 ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ವೇಳೆ ಬೈಕ್ ಸವಾರ ಹಾಗೂ ಎಸ್ಐ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬೈಕ್ ಸವಾರ ಹಣ ನೀಡದೇ ತನ್ನ ಪತ್ನಿಯೊಂದಿಗೆ ಮುಂದೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಎಸ್ಐ ಬಂದು ಚಲಿಸುತ್ತಿದ್ದ ಬೈಕ್’ಗೆ ಒದ್ದಿದ್ದಾರೆ.ಇದರಿಂದ ಬೈಕ್’ನಲ್ಲಿದ್ದ ಉಷಾ ಹಾಗೂ ರಾಜು ಕೆಳಕ್ಕೆ ಬಿದ್ದಿದ್ದಾರೆ. 

ಗರ್ಭಿಣಿಯಾಗಿದ್ದ ಉಷಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ತಿರುಚಿ ಎಸ್ಐ ಕಾಮಾರಾಜು ಮೇಲೆ ಎಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.