ಬೆಂಗಳೂರು(ಸೆ.11): ಪೊಲೀಸರು ಕಾನೂನು ಪಾಲಿಸಬೇಕು. ತಪ್ಪಿತಸ್ಥರನ್ನು ಮಟ್ಟಹಾಕಿ ಕಾನೂ ಕ್ರಮಕ್ಕೆ ಒಳಪಡಿಸಬೇಕು. ಆದರೆ ಇಲ್ಲಿ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ಕೇಸು ದಾಖಲು ಮಾಡಲು ಹೊರಟಿದ್ದ ಅಧಿಕಾರಿಯೊಬ್ಬರು ಒಂದೇ ಒಂದು ಅವಾಝ್​ ಗೆ ಕೇಸ್​ ಕ್ಲೋಸ್​ ಮಾಡಿದ ಕಥೆ ಇದು.

ನಿನ್ನೆ ಬೆಳಗಿನ ಜಾವ ತಿಲಕ್​ನಗರ ಪೊಲೀಸರು ಅಕ್ರಮ ಜಾನುವಾರು ಸಾಗಾಣಿಕೆ ನಡೀತಿದೆ ಅನ್ನೋ ಪಕ್ಕಾ ಮಾಹಿತಿ ಮೇರೆಗೆ ರೇಡ್ ಮಾಡಿದರು. ದಾಳಿ ವೇಳೆ ಹಸುಗಳನ್ನ ತುಂಬಿದ್ದ ಟ್ರಕ್​ ಚಾಲಕ ಓಡಿಹೋದ. ಎಸ್​ಐ ತಿಮ್ಮರಾಜು ಸಾಹೇಬ್ರು ಹಸುಗಳನ್ನು ಟ್ರಕ್​ ಸಮೇತ ಠಾಣೆಗೆ ತಂದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಅದೆಲ್ಲಿಂದಲೋ ಒಂದು ಗುಂಪು ಏಕಾಏಕಿ ಠಾಣೆಗೆ ದಾಳಿ ಇಟ್ಟರು. 

ತಿಲಕ್​ನಗರ ಸಬ್​ ಇನ್ಸ್​ಪೆಕ್ಟರ್​ ತಿಮ್ಮರಾಜು ಗೋ ಹತ್ಯಾ ನಿಷೇಧ ಕಾಯ್ದೆಯಡಿ ಕೇಸು ದಾಖಲಿಸೋ ಪ್ರೊಸೀಜರ್​ ನಡೆಸುತ್ತಿದ್ದರು. ಅಷ್ಟರಲ್ಲಿ ಮುಜೀಬ್​ ಮತ್ತು ಮುನಾವರ್​ ಎಂಬ ಇಬ್ಬರು ವ್ಯಕ್ತಿಗಳು ಗುಂಪು ಕಟ್ಟಿಕೊಂಡು ಬಂದರು. ಠಾಣಾ ವ್ಯಾಪ್ತಿಯ ಕೆಲ ಅಂಗಡಿಗಳನ್ನ ಬಂದ್​ ಮಾಡಿ ಹಸುಗಳನ್ನ ಹಿಡಿದಿದ್ಯಾಕೆ ಅಂತಾ ಪಿಎಸ್​ಐಗೆ ಅವಾಜ್​ ಹಾಕಿದ್ದಾರೆ.

ಇವರ ಬೆದರಿಕೆಗೆ ಮಣಿದ ಎಸ್​ಐ ನಿಮ್ಮ ಹಸುಗಳ ತಂಟೆಗೆ ಬರಲ್ಲ, ಇನ್ಮೇಲೆ ನೀವ್​ ಆರಾಮಾಗಿ ಹಬ್ಬ ಮಾಡ್ಕೊಳ್ಳಿ ಅನ್ನೋ ಮಾತನ್ನಾಡಿದ ಆಡಿಯೋ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ. ಅಷ್ಟೇ ಅಲ್ಲ ಹಸುಗಳನ್ನ ಕೂಡ ಬಿಟ್ಟು ಕಳುಹಿಸಿದ್ದಾರೆ. ನೋಡಿದ್ರಲ್ವಾ. ಎಂಥಾ ಬಲಿಷ್ಟರನ್ನಾದರೂ ಮಟ್ಟ ಹಾಕಬೇಕಿದ್ದ ಖಾಕಿ, ಇಂಥ ಗೊಡ್ಡು ಬೆದರಿಕೆಗೆ ಮಣಿಯುವಂತಾಯ್ತು.