ನವದೆಹಲಿ[ಜ.22]  ಈ ಹೇಳಿಕೆ ವಿವಾದವನ್ನು ಹೊತ್ತಿಸಿದೆ. ಇಡೀ ದೇಶದಲ್ಲಿರುವ ಮದರಸಾಗಳನ್ನು ಬಂದ್ ಮಾಡಬೇಕು ಎಂದಿಉ ಪ್ರಧಾನಿಗೆ ಪತ್ರ ಬರೆದಿರುವುದು ಈಗ ದೊಡ್ಡ ಸುದ್ದಿಯಾಗುತ್ತಿದೆ. ಪ್ರಧಾನಿಗೆ ಪತ್ರ ಬರೆದಿರುವ ವಸೀಮ್ ರಿಜ್ವಿ , ಮದರಸಾಗಳ ಮೂಲಕ ಮುಸ್ಲಿಂ ಮಕ್ಕಳು ಉಗ್ರರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ದೇಶದಲ್ಲಿ ಒಂದೇ ಸಿವಿಲ್ ಕಾನೂನು ಬರಬೇಕು. ಮುಸ್ಲಿಂ ಮಕ್ಕಳು ತಮಗೆ ಬೇಕು ಎಂದಾದರೆ ಮದರಸಾಗಳಿಗೆ ದಾಖಲಾತಿ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಬಂದ್ ನಡುವೆ ಸಮಸ್ತ ಜನತೆಗೆ ನರೇಂದ್ರ ಮೋದಿ ಬರೆದ ಪತ್ರ...

ಐಎಸ್‌ಐಎಸ್‌ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮಕ್ಕಳನ್ನು ಮದರಸಾಗಳ ಮೂಲಕವೇ ಟಾರ್ಗೆಟ್ ಮಾಡುತ್ತಿದೆ. ಗುಪ್ತಚರದಳ ಕಲೆ ಹಾಕಿರುವ ಮಾಹಿತಿಯೂ ಸಹ ಇದೇ ಅಶವನ್ನು ಸಾರಿ ಹೇಳಿದೆ. ಒಟ್ಟಿನಲ್ಲಿ ಮುಸಲ್ಮಾನ ಮುಖಂಡರೊಬ್ಬರೆ ಈ ಹೇಳಿಕೆ ನೀಡಿ ಪ್ರಧಾನಿಗೆ ಪತ್ರ ಬರೆದಿರುವುದು ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ.