ಫೇಸ್ ಬುಕ್ ನಲ್ಲಿ ಗೌರಿ ಹಂತಕನ ಪರವಾಗಿ ಶ್ರೀ ರಾಮ ಸೇನೆ ಅಭಿಯಾನ

First Published 15, Jun 2018, 1:37 PM IST
Shri Ram Sena Support Gauri Murderer Parashuram Wagmore
Highlights

ಗೌರಿ‌ ಲಂಕೇಶ್ ಹತ್ಯೆ ಪ್ರಕರಣದಲ್ಲಿ  ಬಂಧಿತನಾಗಿರುವ ಆರೋಪಿ ಕುಟುಂಬಕ್ಕೆ ಸಹಾಯ ಮಾಡಲು ಶ್ರೀರಾಮ ಸೇನೆ ಸಂಚಾಲಕನೋರ್ವ  ಮನವಿ ಮಾಡಿದ ವಿಚಾರ ಬೆಳಕಿಗೆ ಬಂದಿದೆ.  

ವಿಜಯಪುರ :  ಗೌರಿ‌ ಲಂಕೇಶ್ ಹತ್ಯೆ ಪ್ರಕರಣದಲ್ಲಿ  ಬಂಧಿತನಾಗಿರುವ ಆರೋಪಿ ಕುಟುಂಬಕ್ಕೆ ಸಹಾಯ ಮಾಡಲು ಶ್ರೀರಾಮ ಸೇನೆ ಸಂಚಾಲಕನೋರ್ವ  ಮನವಿ ಮಾಡಿದ ವಿಚಾರ ಬೆಳಕಿಗೆ ಬಂದಿದೆ.  

ಬಂಧಿತ ಆರೋಪಿಗಳ ಪರ ಹಣ ಸಂಗ್ರಹಣೆಗೆ  ಶ್ರೀರಾಮ ಸೇನೆ ಮುಂದಾಗಿದ್ದು,  ಹಣ ಸಹಾಯ ಮಾಡುವಂತೆ ಜನರಲ್ಲಿ ಮನವಿ ಕೇಳಿದ್ದಾರೆ.  ವಿಜಯಪುರ ಶ್ರೀರಾ‌ಮ ಸೇನಾ ಜಿಲ್ಲಾಧ್ಯಕ್ಷ ರಾಕೇಶ್ ಮಠ ಎಂಬಾತ ಈ ರೀತಿಯ ಮನವಿ ಮಾಡಿ  ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾನೆ. 

ಧರ್ಮ ರಕ್ಷಣೆಗಾಗಿ ನಿಮ್ಮ ಪಾಲಿರಲಿ. ಪರಶುರಾಮ ಕುಟುಂಬ ಸಂಕಷ್ಟದಲ್ಲಿದ್ದು ಧನ ಸಹಾಯ ಮಾಡಿ ಎಂದು ಫೇಸ್ ಬುಕ್ ನಲ್ಲಿ ಪರಶುರಾಮ ಕುಟುಂಬಸ್ಥರ ಅಕೌಂಟ್ ನಂಬರ್ ಹಾಕಲಾಗಿದೆ. ಇಷ್ಟೇ ಅಲ್ಲದೇ  ಜೈ ಪರಶುರಾಮ್, ಜೈ ಮಂಗಲಪಾಂಡೆ, ಜೈ ನಾಥೂರಾಮ್ ಘೋಡ್ಸೆ ಎಂದು ಪ್ರಚಾರ ಮಾಡುತ್ತಿದ್ದಾರೆ.  ಎರಡು ದಿನಗಳಿಂದ ಪರಶುರಾಮ ಧರ್ಮ ರಕ್ಷಕ‌ ಎಂದು ಫೋಟೊ ವೈರಲ್ ಮಾಡಿದ್ದರು. ಇದೀಗ ಇಂದು‌ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದ್ದಾರೆ 

ಈ ಹಿಂದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಯುವಕರು ಸಂಘಟನೆಗೆ ಸೇರಿದವರಲ್ಲ ಎಂದು ಪ್ರಮೋದ್ ಮುತಾಲಿಕ್‌ ಹೇಳಿದ್ದರು. ಆದರೆ ಇದೀಗ ಅವರ ಹಿಂಬಾಲಕರು ಪರಶುರಾಮನ ಪರವಾಗಿ ಅಭಿಯಾನ ಆರಂಭಿಸಿದ್ದಾರೆ. 

 

 

 

loader