'ಚಡ್ಡಿ ಸೇನೆ'ಯನ್ನು ಒಂದು ತಿಂಗಳು ಗಡಿ ಕಾಯಲು ಕಳಿಸಿ: ಮೆವಾನಿ

First Published 12, Feb 2018, 8:56 PM IST
Should send Chaddi Sena on border for one month Jignesh Mevani takes dig at Mohan Bhagwat
Highlights

ಯುದ್ದಕ್ಕೆ ಭಾರತೀಯ ಸೇನೆ ಸನ್ನದ್ಧವಾಗಲು ಆರೇಳು ತಿಂಗಳು ಬೇಕು. ಆದರೆ ದೇಶ ರಕ್ಷಣೆ ಮಾಡಲು ಆರ್'ಎಸ್'ಎಸ್ ಮೂರೇ ದಿನಗಳು ಸಾಕು. ಇದು ನಮ್ಮ ಸಾಮರ್ಥ್ಯ ಎಂದು ಮೋಹನ್ ಭಾಗವತ್ ಹೇಳಿದ್ದರು.

ವಡಗಾವ್(ಫೆ.12): ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಆರ್'ಎಸ್'ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ತಿರುಗೇಟು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಯುದ್ದಕ್ಕೆ ಭಾರತೀಯ ಸೇನೆ ಸನ್ನದ್ಧವಾಗಲು ಆರೇಳು ತಿಂಗಳು ಬೇಕು. ಆದರೆ ದೇಶ ರಕ್ಷಣೆ ಮಾಡಲು ಆರ್'ಎಸ್'ಎಸ್ ಮೂರೇ ದಿನಗಳು ಸಾಕು. ಇದು ನಮ್ಮ ಸಾಮರ್ಥ್ಯ ಎಂದು ಮೋಹನ್ ಭಾಗವತ್ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೆವಾನಿ, ಮೋಹನ್ ಭಾಗವತ್ ಹಾಗೂ ಅವರ ಚಡ್ಡಿ ಸೇನೆಯನ್ನು ಒಟ್ಟು ಮಾಡಿ ಒಂದು ತಿಂಗಳು ಕಾಲ ದೇಶದ ಗಡಿಗೆ ಕಳಿಸಬೇಕು. ಆಗ ಸೇನೆ ಎಷ್ಟು ಕಷ್ಟ-ಕಾರ್ಪಣ್ಯಗಳನ್ನು ಸಹಿಸಿಕೊಂಡು ಹೇಗೆಲ್ಲ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಭಾಗವತ್ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ರಾಹುಲ್ ಗಾಂಧಿ ಕೂಡ ಭಾಗವತ್ ಹೇಳಿಕೆಯನ್ನು ಖಂಡಿಸಿದ್ದು, ಮೋಹನ್ ಭಾಗವತ್ ಹೇಳಿಕೆ ಸರಿಯಲ್ಲ, ಇದನ್ನು ಕೇಳಿ ಮನಸ್ಸಿಗೆ ನೋವು ಉಂಟಾಯಿತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದರು.

loader