ಬೆಂಗಳೂರು (ಸೆ.27): ಕಾವೇರಿ ವಿಚಾರದಲ್ಲಿ ಸರ್ಕಾರದ ಎರಡು ದಾರಿಗಳಿವೆ. ಒಂದು ಸುಪ್ರೀಂ ಆದೇಶವನ್ನು ಪಾಲನೆ ಮಾಡುವುದು, ಇನ್ನೊಂದು ಮಾಡದಿರುವುದು ಎಂದು ಇಂದು ಸುಪ್ರೀಂ ತೀರ್ಪು ಹೊರಬಿದ್ದ ಬಳಿಕ ಬಿ.ವಿ ಆಚಾರ್ಯ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಅಭಿಪ್ರಾಯದ ಪ್ರಕಾರ ಸುಪ್ರೀಂ ಆದೇಶ ಪಾಲನೆ ಮಾಡಬಾರದು. ಒಂದು ವೇಳೆ ಮಾಡಿದರೆ ವಿಧಾನಸಭೆ ನಿರ್ಣಯವನ್ನು ಉಲ್ಲಂಘಿಸಿದಂತಾಗುತ್ತದೆ. ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ನೀರು ಎಂದು ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ತಮಿಳುನಾಡಿಗೆ ಕುಡಿಯುವುದಕ್ಕಾಗಿ ನೀರು ಬಿಡುಗೆಡ ಮಾಡಿದರೆ ಸಮಸ್ಯೆಯಿಲ್ಲ. ಆದರೆ ಅವರು ಕೃಷಿಗಾಗಿ ನೀರು ಕೇಳುತ್ತಿದ್ದಾರೆ. ಅವರಿಗೆ ಕೊಡುವಷ್ಟು ನೀರು ನಮ್ಮಲ್ಲಿ ಲಭ್ಯವಿಲ್ಲದ ಕಾರಣ ನಾವು ಸುಪ್ರೀಂ ಆದೇಶ ಪಾಲಿಸಬಾರದು ಎಂದು ಹಿರಿಯ ಅಡ್ವೋಕೇಟ್ ಜನರಲ್ ಬಿ ವಿ ಆಚಾರ್ಯರವರು ಹೇಳಿದ್ದಾರೆ.