ಬೆಂಗಳೂರಿನಲ್ಲಿ ಪೊಲೀಸರಿಂದ ಶೂಟೌಟ್
ಬೆಂಗಳೂರು(ಆ.10): ಸಿಲಿಕಾನ್ ಸಿಟಿಯಲ್ಲಿ ಪೊಲೀಸರು ದರೋಡೆಕೋರರ ಮೇಲೆ ಶೂಟೌಟ್ ನಡೆಸಿದ ಘಟನೆ ನಗರದ ಹೊರವಲಯದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿ ಗ್ರೂಪ್ ಬಡಾವಣೆಯಲ್ಲಿ ನಡೆದಿದೆ.
ಶ್ರೀಮಂತರ ಮಕ್ಕಳನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಆರೋಪಿಗಳು ಇದ್ದ ಬಗ್ಗೆ ಮಾಹಿತಿ ಆಧರಿಸಿ ಹೋಗಿದ್ದ ಪೊಲೀಸರ ಮೇಲೆ ಶಂಕಿತ ಆರೋಪಿ ವಿಜಯ್ ಎಂಬಾತ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ರಕ್ಷಣೆಗಾಗಿ ಬ್ಯಾಡರಹಳ್ಳಿ ಇನ್ಸ್'ಪೆಕ್ಟ'ರ್ ಸತ್ಯನಾರಾಯಣ ಗುಂಡು ಹಾರಿಸಿದ್ದಾರೆ. ಗುಂಡಿನಿಂದ ಶಂಕಿತ ವಿಜಯ್ ಗಾಯಗೊಂಡಿದ್ದಾನೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)
