ಮುಂಬೈ(ಸೆ.26): ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಯುವತಿಯೊಬ್ಬಳು ಪ್ರಾಣವನ್ನೇ ಕಳೆದು ಕೊಳ್ಳಬೇಕಿತ್ತು ಆದರೆ ಸಹ ಪ್ರಯಾಣಿಕನೋರ್ವನ ಸಮಯ ಪ್ರಜ್ಞೆ ಮತ್ತು ರೈಲ್ವೆ ಪೊಲೀಸರ ಸಹಾಯದಿಂದ ಯುವತಿಯ ಪ್ರಾಣ ಉಳಿದಿದೆ. 

Add Asianetnews Kannada as a Preferred SourcegooglePreferred

ಮುಂಬೈನ ಪುಣೆ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣ ಬರುತ್ತಿದ್ದಂತೆ ಬಾಗಿಲ ಬಳಿಯೇ ನಿಂತಿದ್ದ ಯುವತಿ, ಇಳಿಯಲು ನೆಗೆದಿದ್ದಾಳೆ. ಆದರೆ ರೈಲು ವೇಗವಾಗಿ ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ ಯುವತಿ ಕೆಳಗಿ ಬಿದ್ದಿದ್ದಾಳೆ.

ಕೂಡಲೇ ಬಾಗಿಲ ಬಳಿ ನಿಂತಿದ್ದ ಮತ್ತೊಬ್ಬ ಯುವಕ ಕೂಡ ಈಕೆಯನ್ನ ರಕ್ಷಿಸಲು ಆತನು ರೈಲಿನಿಂದ ಕೆಳಗಿಳಿದಿದ್ದಾನೆ. ಅಷ್ಟರಲ್ಲಾಗಲೇ ಆ ಯುವತಿಯ ಕಾಲುಗಳು ರೈಲು ಬೋಗಿಯ ಕೆಳಗೆ ಹೋಗಿದ್ದವು.
ಕೂಡಲೇ ಪೊಲೀಸರೊಬ್ಬರು ಓಡಿ ಬಂದು ಯುವತಿಯನ್ನ ಹೊರಗೆ ಎಳೆದಿದ್ದಾರೆ. ಅದೃಷ್ಟವಶಾತ್ ಯುವತಿಗೆ ಯಾವುದೇ ಅಪಾಯವಾಗಿಲ್ಲ.