ಸೋನಿಯಾ ನಾರಂಗ್‌ ಎಂಬ ಖಡಕ್‌ ಪೊಲೀಸ್‌ ಅಧಿಕಾರಿ ಈಗ ರಾಷ್ಟ್ರೀಯ ತನಿಖಾದಳದ ಎಸ್ಪಿ. ಬಹಳ ಹಿಂದೆ ಮಂತ್ರಿಯೊಬ್ಬರಿಗೆ ಕಪಾಳಕ್ಕೆ ಹೊಡೆದು ಸುದ್ದಿಯಾಗಿದ್ದ ಸೋನಿಯಾ ಲೋಕಾಯುಕ್ತ ಎಸ್ಪಿಯಾಗಿ, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್‌ ಪುತ್ರ ಅಶ್ವಿನ್‌ ನಡೆಸಿದ ‘ಲೋಕಾಯುಕ್ತ ಹಗರಣ'ವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕರ್ತವ್ಯಕ್ಕೆ ಹಾಜರಾದ ಮೇಲೆ ಮನೆ, ಸಂಸಾರ ಯಾವುದೂ ತಲೆಗೆ ಬರಲ್ಲ ಅನ್ನೋ ಸೋನಿಯಾ ಇಬ್ಬರು ಮಕ್ಕಳ ಮುದ್ದಿನ ಅಮ್ಮ. ಆದರೂ ಮಕ್ಕಳು ಪುಟ್ಟವರಾಗಿದ್ದಾಗ ಡ್ಯೂಟಿಗೆ ಹಾಜರಾಗುತ್ತಿದ್ದ ಪಡಿಪಾಟಲನ್ನು ನೆನೆಸಿಕೊಂಡರೆ ಈಗಲೂ ಅವರಿಗೆ ದಿಗಿಲಾಗುತ್ತದೆ.
ಸೋನಿಯಾ ನಾರಂಗ್ ಎಂಬ ಖಡಕ್ ಪೊಲೀಸ್ ಅಧಿಕಾರಿ ಈಗ ರಾಷ್ಟ್ರೀಯ ತನಿಖಾದಳದ ಎಸ್ಪಿ. ಬಹಳ ಹಿಂದೆ ಮಂತ್ರಿಯೊಬ್ಬರಿಗೆ ಕಪಾಳಕ್ಕೆ ಹೊಡೆದು ಸುದ್ದಿಯಾಗಿದ್ದ ಸೋನಿಯಾ ಲೋಕಾಯುಕ್ತ ಎಸ್ಪಿಯಾಗಿ, ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಪುತ್ರ ಅಶ್ವಿನ್ ನಡೆಸಿದ ‘ಲೋಕಾಯುಕ್ತ ಹಗರಣ'ವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಕರ್ತವ್ಯಕ್ಕೆ ಹಾಜರಾದ ಮೇಲೆ ಮನೆ, ಸಂಸಾರ ಯಾವುದೂ ತಲೆಗೆ ಬರಲ್ಲ ಅನ್ನೋ ಸೋನಿಯಾ ಇಬ್ಬರು ಮಕ್ಕಳ ಮುದ್ದಿನ ಅಮ್ಮ. ಆದರೂ ಮಕ್ಕಳು ಪುಟ್ಟವರಾಗಿದ್ದಾಗ ಡ್ಯೂಟಿಗೆ ಹಾಜರಾಗುತ್ತಿದ್ದ ಪಡಿಪಾಟಲನ್ನು ನೆನೆಸಿಕೊಂಡರೆ ಈಗಲೂ ಅವರಿಗೆ ದಿಗಿಲಾಗುತ್ತದೆ.
ಮಗುವನ್ನು ನಿದ್ದೆ ಮಾಡಿಸಿ, ಮನೆಲಾಕ್ ಮಾಡಿ ರಾತ್ರಿಪಾಳಿ ಕೆಲಸಕ್ಕೆ ಹಾಜರಾಗ್ತಿದ್ದೆ!
ಈಗ ಅಂತಲ್ಲ, ಚಿಕ್ಕ ಮಗುವಿದ್ದಾಗಿಂದಲೂ ಸೋನಿಯಾಗೆ ಭಯ ಅಂದ್ರೆ ಏನು ಅಂತಲೇ ತಿಳಿದಿರಲಿಲ್ಲವಂತೆ. ಇವತ್ತಿಗೂ ಅವರಿಗೆ ಭಯದ ಅನುಭವ ಆಗಿಯೇ ಇಲ್ಲ. ಇವರ ಅಪ್ಪ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದವರು. ಚಂಡೀಗರ್ನಲ್ಲಿ ಬಾಲ್ಯ ಕಳೆದ ಇವರಿಗೆ ಅಪ್ಪ ಕಾಣಲು ಸಿಗುತ್ತಿದ್ದದ್ದೇ ಬಲು ಅಪರೂಪವಂತೆ. ಬೆಳಗ್ಗೆ ಏಳೋ ಮುಂಚೆ ಮನೆಬಿಟ್ಟು ಹೋದ್ರೆ, ಇವರು ನಿದ್ದೆಹೋದ ನಂತರ ವಾಪಾಸಾಗ್ತಿದ್ದರು. ಇದುಬಿಟ್ಟರೆ, ಕ್ಯೂಟ್ ಆಗಿದ್ದ ಸೋನಿಯಾಗೆ ಸ್ಕೂಲ್ನಲ್ಲಿ ಸಾಂಸ್ಕೃತಿಕ ಚಟುವಟಿಕೆ ಇದ್ದರೆ ಯಾವತ್ತೂ ಸಿಗುತ್ತಿದ್ದದ್ದು ರಾಜಕುಮಾರಿ ಪಾತ್ರ! ಮನೆಯಲ್ಲೂ ಈಕೆ ಮುದ್ದಿನ ರಾಜಕುಮಾರಿ, ಅದನ್ನು ಕಂಡು ಅಣ್ಣಂಗೆ ಜಲಸ್ ಆಗ್ತಿತ್ತು. ಈಗ ಸೋನಿಯಾರ ಇಬ್ಬರು ಮಕ್ಕಳಲ್ಲಿ ಮಗಳೇ ಚಿಕ್ಕವಳು. ಅವಳನ್ನು ಹೆಚ್ಚು ಮುದ್ದು ಮಾಡಿದರೆ ಮಗನಿಗೆ ಸಣ್ಣ ಹೊಟ್ಟೆಕಿಚ್ಚು.
ವರದಿ: ಕನ್ನಡ ಪ್ರಭ
