ಇದು ಸಾಂಸ್ಕೃತಿಕ ನಗರಿ ಮೈಸೂರನ್ನು‌ ಬೆಚ್ಚಿ ಬೀಳಿಸೋ ಸುದ್ದಿ..!

news | Thursday, June 7th, 2018
Suvarna Web Desk
Highlights
  • ನಿಫಾ ವೈರಸ್ ಆತಂಕ‌ ಜೀವಂತವಿರುವಾಗಲೇ ಕೇರಳದಿಂದ ಕರ್ನಾಟಕಕ್ಕೆ ಭಾರೀ ಆತಂಕ
  • ಸ್ವಚ್ಚ ನಗರಿಯ ಪಟ್ಟಕ್ಕೂ ಬಂದಿದೆ ಸಂಚಕಾರ!! ಮೈಸೂರನ್ನು ಕಸದ ತೊಟ್ಟಿ ಮಾಡಿಕೊಂಡಿರುವ ಕೇರಳ

ಬೆಂಗಳೂರು: ಅತ್ತ ತಮಿಳುನಾಡು ಕಾವೇರಿ ಕ್ಯಾತೆ ತೆಗೆದಿರುವಾವಲೇ, ಇತ್ತ ನೆರೆಯ ಕೇರಳ ರಾಜ್ಯವು ತ್ಯಾಜ್ಯದ ಕ್ಯಾತೆ ಶುರುಮಾಡಿದೆ.  ಕೇರಳ ರಾಜ್ಯದ ಟನ್ ಗಟ್ಟಲೆ ತ್ಯಾಜ್ಯ‌ ವಸ್ತುಗಳು ಮೈಸೂರಿಗೆ ರವಾನೆಯಾಗುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕೇರಳವು ಪ್ಲಾಸ್ಟಿಕ್, ಬಯೋ ವೇಸ್ಟ್, ಸಾಲಿಡ್‌ ವೇಸ್ಟ್, ಮೆಡಿಕಲ್ ವೇಸ್ಟ್ ಎಲ್ಲದಕ್ಕೂ ಮೈಸೂರು ನಗರವನ್ನು ಕಸದ ತೊಟ್ಟಿ ಮಾಡಿಕೊಂಡಿದೆ. ಪ್ರತಿನಿತ್ಯ 10-15 ಲಾರಿಗಳಲ್ಲಿ ತ್ಯಾಜ್ಯ ವಸ್ತುಗಳು ಮೈಸೂರಿಗೆ ಬರುತ್ತಿವೆ.

ಸ್ಥಳೀಯರ ಮಾಹಿತಿ ಆಧರಿಸಿ ನಗರಪಾಲಿಕೆ ಅಧಿಕಾರಿ, ಪಾಲಿಕೆ ಸದಸ್ಯರು ಕಾರ್ಯಾಚರಣೆ ನಡೆಸಿದ್ದಾರೆ.  ತ್ಯಾಜ್ಯ ಹೊತ್ತು‌ ತಂದಿದ್ದ ಲಾರಿಯನ್ನು ಮೈಸೂರು-ನಂಜನಗೂಡು ರಸ್ತೆಯಲ್ಲಿ ಜಪ್ತಿಮಾಡಲಾಗಿದೆ. 

ಮೈಸೂರಿನ ರಾಜೀವ್ ನಗರ, ಭಾರತ್ ನಗರ ಮತ್ತು ಬನ್ನೂರು ರಸ್ತೆಯ ರಂಗಾಚಾರಿ ಹುಂಡಿಯ ಖಾಸಗಿ ಡಂಪಿಂಗ್ ಯಾರ್ಡ್ ಗಳಿಗೆ ಕಸ ರವಾನೆಯಾಗುತ್ತಿದೆ. ಒಂದು‌ ಲೋಡ್ ಸಾಗಿಸಲು 25 ಸಾವಿರ ರೂಪಾಯಿ ಪಡೆಯಲಾಗುತ್ತದೆ ಎಮದು ಹೇಳಲಾಗಿದೆ. 

ಸ್ಥಳಕ್ಕೆ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ರಾಮಚಂದ್ರ, ನಗರಪಾಲಿಕೆ ಸದಸ್ಯ ಪ್ರಶಾಂತರ ಗೌಡ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸರಿಗೆ  ಆರೋಗ್ಯಾಧಿಕಾರಿ ದೂರು ನೀಡಿದ್ದಾರೆ. 
 

Comments 0
Add Comment

    Karnataka Elections Workers Get Flower Apple Garlands To Welcome Leaders

    video | Sunday, April 1st, 2018
    Sayed Isthiyakh