ಜಮ್ಮು ಕಾಶ್ಮೀರ(ಸೆ.20): ಭಾನುವಾರ ನಡೆದ ಜಮ್ಮು ಕಾಶ್ಮೀರದ ಉರಿ ಭಯೋತ್ಪಾದಕ ಘಟನೆ ಹಿಂದೆ ದೊಡ್ಡದೊಂದು ಸತ್ಯ ಅಡಗಿದೆ. 18 ಸೈನಿಕರನ್ನು ಬಲಿ ಪಡೆದ ನಾಲ್ಕು ಭಯೋತ್ಪಾದಕ ಮಾಸ್ಟರ್ ಪ್ಲಾನ್ ಒಂದೊಂದಾಗಿ ಹೊರಬೀಳುತ್ತಿದೆ.

ಭಾನುವಾರ ನಸುಕಿನ ಜಾವ ಉರಿ ಸೆಕ್ಟರ್‌ಗೆ ನುಗ್ಗಿದ ನಾಲ್ಕು ಭಯೋತ್ಪಾದಕರು ಭಾರತೀಯ ಯೋಧರಂತೆ ಕಾಣಲು ಕ್ಲೀನಾಗಿ ಶೇವಿಂಗ್ ಹಾಗೂ ಆರ್ಮಿ ಕಟ್ಟಿಂಗ್ ಮಾಡ್ಡಿದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ. ದಾಳಿಗೂ ಮುನ್ನ ನಾಲ್ಕೂ ಭಯೋತ್ಪಾದಕರು ಉರಿ ಸೆಕ್ಟರ್‌'ನಿಂದ ಆರು ಕಿಲೋ ಮೀಟರ್ ದೂರದಲ್ಲಿದ್ದ ಸ್ಥಳೀಯರೊಬ್ಬರ ಮನೆಯಲ್ಲಿ ರಾತ್ರಿ ಕಳೆದಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ಸೇನೆಯವರಂತೆ ಕಾಣುತ್ತಿದ್ದ ಕಾರಣ ಅವರಿಗೆ ನಾವು ಜಾಗ ನೀಡಿರುವುದಾಗಿ ವಿಚಾರಣೆ ವೇಳೆ ಸ್ಥಳಿಯರು ತಿಳಿಸಿದ್ದಾರೆ.

ಇನ್ನೊಂದೆಡೆ ಹತರಾಗಿರುವ ಭಯೋತ್ಪಾದಕರ ಬಳಿ ಪೌಷ್ಟಿಕಾಂಶ ಯುಕ್ತ 26 ಚಾಕಲೇಟ್‌ ಬಾಕ್ಸ್‌ಗಳು, 3 ORS ಖಾಲಿ ಡಬ್ಬಗಳು, ಆರು ರೆಡ್ ಬುಲ್ ಕ್ಯಾನ್‌ಗಳು ಸೇರಿದಂತೆ ಕೆಲವು ಔಷಧಿ ಪೊಟ್ಟಣಗಳು ದೊರೆತಿವೆ. ಈ ಎಲ್ಲಾ ವಸ್ತುಗಳ ಮೇಲೆ ಪಾಕಿಸ್ಥಾನ ಉತ್ಪಾದನೆಯ ಚಿಹ್ನೆ ಇರುವುದು ಭಯೋತ್ಪಾದಕರು ಪಾಕಿಸ್ಥಾನಿಯರು ಅನ್ನೊದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದಂತಾಗಿದೆ.