ಇಲ್ಲೊಂದು ಗ್ರಾಮವಿದೆ   ಈ  ಗ್ರಾಮದಲ್ಲಿ  ಜನ ರಾತ್ರಿಯಾದ್ರೆ ಸಾಕು ಭಯ ಭೀತರಾಗ್ತಾರೆ, ಕತ್ತಲಾದ್ರೆ ಸಾಕು  ಭಯದಿಂದ  ಆ ಊರಿನ ಜನ ಕಂಗಾಲಾಗಿ ಹೋಗುತ್ತಾರೆ,  ಅಷ್ಟಕ್ಕೂ ಆ  ಗ್ರಾಮದಲ್ಲಿ ನಡೆಯುತ್ತಿರುವ ಅಚ್ಚರಿಯಾದ್ರೂ ಏನು ? ಆ ಊರಿನ ಜನ ಕತ್ತಲಾದ್ರೆ ಯಾಕೆ ಭಯ ಭೀತರಾಗ್ತಾರೆ  ಇಲ್ಲಿದೆ ವಿವರ

ಮಂಡ್ಯ(ಅ.31): ನಾವು ಹೇಳ್ತಾ ಇರೋದು ಮಂಡ್ಯ ಜೆಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಗಂಜಾಮ್ ಗ್ರಾಮದ ಬಗ್ಗೆ, ಈ ಗ್ರಾಮದಲ್ಲಿ ರಾತ್ರಿ ಆದ್ರೆ ಸಾಕು ಕೆಲವರ ಮನೆ ಮೇಲೆ ಕಲ್ಲು ಬೀಳುತ್ತಂತೆ. ಕಳೆದ 15 - 20 ದಿನಗಳಿಂದ ತಮ್ಮ ಬೀದಿಯಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆ ಜನ ಕಂಗಾಲಾಗಿದ್ದಾರೆ. ಇಲ್ಲಿನ ದೇವಮ್ಮ ಎಂಬುವರ ಮನೆಯ ಮೇಲೆ ದೊಡ್ಡ ಗಾತ್ರದ ಕಲ್ಲು ಬಿದ್ದು ಮನೆಯ ಹೆಂಚುಗಳು ಒಡೆದು ಹೋಗಿವೆ. 

ಈ ರೀತಿ ಮನೆಗಳ ಮೇಲೆ ಕಲ್ಲು ಬೀಳ್ತಾ ಇರೋದಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚಲು ಯುವಕರು ಗುಂಪೊಂದು ರಾತ್ರಿ ವೇಳೆ ಗಸ್ತು ತಿರುಗಿದ್ರು. ಇಷ್ಟಾದ್ರೂ, ಕಲ್ಲು ಎಸದವರು ಯಾರೋ ಅನ್ನೋದು ಮಾತ್ರ ಪ್ರಶ್ನೆಯಾಗೇ ಉಳಿದಿದೆ. ಇನ್ನು ಮನೆ ಮೇಲೇ ಕಲ್ಲು ಬಿದ್ದಾಗ ಯಾರಾದ್ರು ಬೈದ್ರೆ ಅವ್ರ ಮನೆ ಮೇಲೆ ಕೂಡ ಕಲ್ಲು ಬೀಳ್ತಿರೋದು ಇಲ್ಲಿನ ಜನ್ರನ್ನು ಮತ್ತಷ್ಟು ಭಯ ಭೀತಗೊಳಿಸಿದೆ.

ಒಟ್ನಲ್ಲಿ, ಕಳೆದ 20 ದಿನಗಳಿಂದ ಈ ಬೀದಿಯಲ್ಲಿ ನಡೆಯುತ್ತಿರೋ ಈ ವಿಚಿತ್ರಕ್ಕೆ ಇಲ್ಲಿನ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ.