ಶುಕ್ರವಾರ ಟ್ವೀಟ್ ಮಾಡಿದ ಡೇ, ‘‘ಸುಷ್ಮಾ ಸ್ವರಾಜ್ ಅವರೇ 2017ರಲ್ಲಿ ಟ್ವೀಟ್ ಮಾಡುವುದನ್ನು ಬಿಟ್ಟು ಆರಾಮವಾಗಿರುವ ನಿರ್ಣಯ ತೆಗೆದುಕೊಳ್ಳಿ,’’ ಎಂದು ಸಲಹೆ ನೀಡಿದ್ದರು.

ನವದೆಹಲಿ(ಜ.14): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ‘ಕಡಿಮೆ ಟ್ವೀಟ್’ ಮಾಡಬೇಕೆಂಬ ಲೇಖಕಿ ಶೋಭಾ ಡೇ ಅವರ ಟ್ವೀಟ್ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಟ್ವಿಟರ್ ಬಳಕೆದಾರರು ಸುಷ್ಮಾ ಸ್ವರಾಜ್ ಅವರಿಗೆ ಸೂಚಿಸಿರುವುದನ್ನು ಡೇ ಅವರೇ ಪಾಲನೆ ಮಾಡಬೇಕೆಂದು ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಟ್ವೀಟ್ ಮಾಡಿದ ಡೇ, ‘‘ಸುಷ್ಮಾ ಸ್ವರಾಜ್ ಅವರೇ 2017ರಲ್ಲಿ ಟ್ವೀಟ್ ಮಾಡುವುದನ್ನು ಬಿಟ್ಟು ಆರಾಮವಾಗಿರುವ ನಿರ್ಣಯ ತೆಗೆದುಕೊಳ್ಳಿ,’’ ಎಂದು ಸಲಹೆ ನೀಡಿದ್ದರು.

ಕಳೆದ ವರ್ಷವೂ ಒಲಿಂಪಿಕ್ ಅಥ್ಲೆಟ್‌ಗಳನ್ನು ವಿಮರ್ಶೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದರು. ಆಗ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಸೇರಿ ಇತರ ಅಥ್ಲೆಟ್‌ಗಳು ಡೇ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.