ಪರೇಶ್ ಮೆಸ್ತಾ ಹತ್ಯೆಯನ್ನು ಖಂಡಿಸಿ ರಾಜಭವನದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ.12): ಪರೇಶ್ ಮೆಸ್ತಾ ಹತ್ಯೆಯನ್ನು ಖಂಡಿಸಿ ರಾಜಭವನದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸಲ್ಮಾನ ಗೂಂಡಾಗಳು ಲಾಠಿ, ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಪರೇಶ್ ಮೇಸ್ತಾ ಕೊಲೆಯನ್ನು ಮುಚ್ಚಿಹಾಕುವ ವ್ಯವಸ್ಥಿತ ಷಡ್ಯಂತ್ರವನ್ನು ಸರ್ಕಾರ ಮಾಡುತ್ತಿದೆ. ಹೊನ್ನಾವರಕ್ಕೆ ಹೋಗಿ ಸಿಎಂ ಪರೇಶ್ ಮೇಸ್ತಾ ಹೆಣದ ಮೇಲೆ ಶಿಲಾನ್ಯಾಸ ನೆರವೇರಿಸಿ ಬಂದಿದ್ದಾರೆ. ಜಿಹಾದಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಿಎಂ ಬೆನ್ನೆಲುಬಾಗಿ ನಿಂತಿದ್ದಾರೆ. ಹೀಗಾಗಿ ಹಿಂದೂ ಕಾರ್ಯಕರ್ತರನ್ನು ಹಾಡುಹಗಲೇ ಅಟ್ಟಾಡಿಸಿಕೊಂಡು ಕೊಲ್ಲುತ್ತಿದ್ದಾರೆ. ಈ ಕೇಸನ್ನು ಮುಚ್ಚಿ ಹಾಕಿದರೆ ಇಡೀ ಕರಾವಳಿ ಹೊತ್ತಿ ಉರಿಯುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
